
ಮಂಗಳೂರು: ಕುದ್ರೋಳಿಯ ಪುಣ್ಯಭೂಮಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಿವ್ಯ ಸನ್ನಿಧಾನದಲ್ಲಿ, ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ನಾರೀಶಕ್ತಿಯನ್ನು ಕೊಂಡಾಡುವ ‘ಮಹಿಳಾ ದಸರಾ’ ಸಂಭ್ರಮವು ಇದೇ ಅಕ್ಟೋಬರ್ 19, 2026 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಅಮ್ಮನ ಮಡಿಲ ಪ್ರೀತಿ, ಜಗನ್ಮಾತೆಯ ಕರುಣಾಮಯಿ ನೋಟ ಮತ್ತು ಹೆಜ್ಜೆಯ ಗೆಜ್ಜೆಯಲ್ಲಿ ಮೊಳಗುವ ಪರಂಪರೆಯ ನಾದ ಇವೆಲ್ಲವೂ ಒಂದಾಗಿ ಸಂಗಮಿಸುವ ಪಾವನ ಕ್ಷಣವಿದು.
ತನ್ನ ನಿಸ್ವಾರ್ಥ ಪ್ರೀತಿಯಿಂದ ಸಂಸಾರವನ್ನು ಪೊರೆದು, ತ್ಯಾಗ-ಸಹನೆಯಿಂದ ಇಡೀ ಸಮಾಜವನ್ನು ಮುನ್ನಡೆಸುವ ಪ್ರತಿಯೊಬ್ಬ ಹೆಣ್ಣಿಗೂ ಭಕ್ತಿಯಿಂದ ನಮಿಸುವ ಅಪೂರ್ವ ವೇದಿಕೆಯಿದು.
ಒಂದೆಡೆ ಜಗನ್ಮಾತೆಯ ದಿವ್ಯ ಕೃಪೆ, ಇನ್ನೊಂದೆಡೆ ಕೈಮುಗಿದು ಪ್ರಾರ್ಥಿಸುವ ಮಾತೃ ಹೃದಯಗಳ ಸ್ಪಂದನ ಮತ್ತು ಬಣ್ಣಬಣ್ಣದ ನೃತ್ಯ-ಸಂಗೀತದ ನಾದದಲ್ಲಿ ಅರಳುವ ಸಾಂಸ್ಕೃತಿಕ ಸೊಬಗು, ಕುದ್ರೋಳಿಯ ಅಂಗಳದಲ್ಲಿ ನಾರೀಶಕ್ತಿಯ ಈ ದಿವ್ಯ ಪ್ರಭೆ ಮನೆಮನಗಳಲ್ಲಿ ಬೆಳಗಲಿದೆ.
_Sathish Kapikad


