Close Menu
SK Media NewsSK Media News
    What's Hot

    ಅಮೆರಿಕದ ಸಂಸತ್ತಿನ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ ಕರ್ನಾಟಕದ ಸಚಿವರಾದ ಡಾ. ಯು.ಟಿ.ಖಾದರ್ 

    July 29, 2026

    ಗಾಂಜಾ, ಎಂಡಿಎಂಎ, ಚರಸ್ ಸೇರಿದಂತೆ ರೂ. 82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ ಮಂಗಳೂರು ಪೊಲೀಸರು

    July 29, 2026

    ಕರ್ನಾಟಕದ ಆಹಾರ ಸುರಕ್ಷತೆಗೆ ಹೊಸ ನಿಯಮ: ಅಮೆರಿಕದ ಪ್ರತಿಷ್ಠಿತ Purdue ವಿಶ್ವವಿದ್ಯಾಲಯದೊಂದಿಗೆ ಸಮಾಲೋಚನೆ

    July 28, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ
    ಕರಾವಳಿ

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು, ಜೂನ್ 09: ಮಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಹನಿ-ಟ್ರಾಪ್ ಮತ್ತು ಬ್ಲಾಕ್‌ಮೇಲ್ ಮಾಡುವ ಮೂಲಕ ಬರೋಬ್ಬರಿ 2.77 ಕೋಟಿ ರೂಪಾಯಿ ಪೀಕಿರುವ ಘೋರ ಅಪರಾಧ ಪ್ರಕರಣದಲ್ಲಿ ಸ್ಥಳೀಯ ಯೂತ್ ಕಾಂಗ್ರೆಸ್ ಪದಾಧಿಕಾರಿ ನಿಜಾಮ್ ಮತ್ತು ಆತನ ಸಹಚರ ಜಿತೇಶ್ ಬಂಧನಕ್ಕೊಳಗಾಗಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣದ ವಿವರಗಳು ಅತ್ಯಂತ ಆಘಾತಕಾರಿಯಾಗಿದ್ದು, ಕಾಂಗ್ರೆಸ್ ಯುವ ನಾಯಕರ ನೈತಿಕ ಅಧಃಪತನ ಮತ್ತು ಕ್ರಿಮಿನಲ್ ಮನಸ್ಥಿತಿಯನ್ನು ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದೆ. ಉದ್ಯಮಿಯೊಬ್ಬರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು, ಸುಲಿಗೆಕೋರರೊಂದಿಗೆ ಕೈಜೋಡಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಯೂತ್ ಕಾಂಗ್ರೆಸ್ ನಾಯಕನ ನಡೆ ಅತ್ಯಂತ ಖಂಡನೀಯವಾಗಿದೆ ಎಂದು ಭಾರತೀಯ ಜನತಾ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ ಅವರು ತಿಳಿಸಿದ್ದಾರೆ.

    ಈ ಇಡೀ ಪ್ರಕರಣದಲ್ಲಿ ಆರೋಪಿಗಳು ನಡೆಸಿರುವ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತ ಮತ್ತು ಕ್ರೂರವಾದುದಾಗಿದೆ. ಸಂತ್ರಸ್ತ ಉದ್ಯಮಿ ತನಗೆ ಎದುರಾದ ಬ್ಲಾಕ್‌ಮೇಲ್ ಸಮಸ್ಯೆಯಿಂದ ಪಾರಾಗಲು ಸಹಾಯ ಕೋರಿ ಯೂತ್ ಕಾಂಗ್ರೆಸ್ ಪದಾಧಿಕಾರಿ ನಿಜಾಮ್‌ನನ್ನು ಸಂಪರ್ಕಿಸಿದಾಗ, ಆತ ಸಂತ್ರಸ್ತನಿಗೆ ನೆರವಾಗುವ ಬದಲು ತಾನೇ ಸ್ವತಃ ಬ್ಲಾಕ್‌ಮೇಲ್ ಜಾಲದ ಸೂತ್ರಧಾರನಾಗಿ ಬದಲಾಗಿದ್ದಾನೆ.

    ಅದಕ್ಕಿಂತಲೂ ಮಿಗಿಲಾಗಿ, ಸಹಚರ ಜಿತೇಶ್ 2024 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿ, ನಕಲಿ ಶವಸಂಸ್ಕಾರದ ಫೋಟೋಗಳು ಮತ್ತು ಉದ್ಯಮಿಯ ಹೆಸರಿರುವ ನಕಲಿ ಡೆತ್‌ನೋಟ್ ತೋರಿಸಿ ಸಂತ್ರಸ್ತನನ್ನು ಕಾನೂನು ಕ್ರಮದ ಹೆಸರಿನಲ್ಲಿ ಹೆದರಿಸಲಾಗಿದೆ. ಮಾನಹಾನಿ ಮತ್ತು ಜೈಲು ಶಿಕ್ಷೆಯ ಭೀತಿಯಿಂದ ಉದ್ಯಮಿ ಕಳೆದ ಎರಡು ವರ್ಷಗಳಿಂದ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಾ ಬಂದಿದ್ದು, ಕೊನೆಗೆ ಜಿತೇಶ್ ಜೀವಂತವಾಗಿರುವುದನ್ನು ಕಂಡು ಪೊಲೀಸರ ಮೊರೆ ಹೋಗಿದ್ದಾರೆ.

    ಕಾಂಗ್ರೆಸ್ ಪಕ್ಷವು ಸದಾ ಸಾರ್ವಜನಿಕವಾಗಿ ನೈತಿಕತೆಯ ಭಾಷಣ ಬಿಗಿಯುತ್ತದೆ, ಆದರೆ ಅದರ ಯುವ ನಾಯಕರು ಮಾತ್ರ ಇಂತಹ ಹನಿ-ಟ್ರಾಪ್ ಮತ್ತು ಬ್ಲಾಕ್‌ಮೇಲ್ ದಂಧೆಗಳನ್ನು ನಡೆಸುತ್ತಿರುವುದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ.

    ಇದು ಕೇವಲ ವೈಯಕ್ತಿಕ ಅಪರಾಧವಲ್ಲ, ಬದಲಿಗೆ ರಾಜಕೀಯ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಸಾರ್ವಜನಿಕರನ್ನು ಬೆದರಿಸುವ ವ್ಯವಸ್ಥಿತ ಕ್ರಿಮಿನಲ್ ಜಾಲವಾಗಿದೆ. ಮಂಗಳೂರಿನ ಶಾಂತಿಪ್ರಿಯ ನಾಗರಿಕರು ಮತ್ತು ಉದ್ಯಮಿಗಳು ಇಂತಹ ರಾಜಕೀಯ ಗೂಂಡಾಗಿರಿಯ ನೆರಳಿನಲ್ಲಿ ಬದುಕುವಂತಾಗಿರುವುದು ದುರದೃಷ್ಟಕರ ಎಂದು ಭಾಜಪ ಯುವ ಮೋರ್ಚಾ ತೀವ್ರ ಕಳವಳ ವ್ಯಕ್ತಪಡಿಸುತ್ತದೆ.

    ಈ ಹಿನ್ನೆಲೆಯಲ್ಲಿ ಭಾಜಪ ಯುವ ಮೋರ್ಚಾ ಮಂಗಳೂರು ಜಿಲ್ಲಾ ಘಟಕವು ಪೊಲೀಸ್ ಇಲಾಖೆಯಿಂದ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಆಗ್ರಹಿಸುತ್ತದೆ. ಈ ಲೂಟಿ ಮಾಡಿದ 2.77 ಕೋಟಿ ರೂಪಾಯಿಗಳ ಹಿಂದೆ ಬೇರೆ ಯಾವುದೇ ಪ್ರಭಾವಿ ರಾಜಕೀಯ ಮುಖಂಡರ ಹಸ್ತವಿದೆಯೇ ಅಥವಾ ಯಾರಿಗಾದರೂ ಹಣದ ಪಾಲು ಹೋಗಿದೆಯೇ ಎಂಬುದನ್ನು ಪತ್ತೆಹಚ್ಚಲು ಆಳವಾದ ತನಿಖೆಯಾಗಬೇಕು.

    ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ ಮಂಗಳೂರು ನಗರ ಪೊಲೀಸರ ಕ್ರಮವನ್ನು ಶ್ಲಾಘಿಸುತ್ತಾ, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ.

    ಒಂದು ವೇಳೆ ಈ ತನಿಖೆಯನ್ನು ಹಳ್ಳಹಿಡಿಯಲು ರಾಜಕೀಯ ಪ್ರಭಾವ ಬಳಸಿದರೆ ಬಿಜೆವೈಎಂ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದು ನಂದನ್ ಮಲ್ಯ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಸೂರಿಂಜೆ-ಪುಚ್ಚಾಡಿ ಹದಗೆಟ್ಟ ರಸ್ತೆ: ಸಾಮೂಹಿಕ ರಾಜೀನಾಮೆ ಹಾಗೂ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
    Next Article ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಶ್ರೀನಿವಾಸ ವಿಶ್ವವಿದ್ಯಾಲಯ : ಮೂರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗೌರವ

    Related Posts

    ಅಂತಾರಾಷ್ಟ್ರೀಯ

    ಅಮೆರಿಕದ ಸಂಸತ್ತಿನ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ ಕರ್ನಾಟಕದ ಸಚಿವರಾದ ಡಾ. ಯು.ಟಿ.ಖಾದರ್ 

    July 29, 2026
    ಕರಾವಳಿ

    ಗಾಂಜಾ, ಎಂಡಿಎಂಎ, ಚರಸ್ ಸೇರಿದಂತೆ ರೂ. 82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ ಮಂಗಳೂರು ಪೊಲೀಸರು

    July 29, 2026
    ಕರಾವಳಿ

    ಕರ್ನಾಟಕದ ಆಹಾರ ಸುರಕ್ಷತೆಗೆ ಹೊಸ ನಿಯಮ: ಅಮೆರಿಕದ ಪ್ರತಿಷ್ಠಿತ Purdue ವಿಶ್ವವಿದ್ಯಾಲಯದೊಂದಿಗೆ ಸಮಾಲೋಚನೆ

    July 28, 2026
    Add A Comment
    Leave A Reply Cancel Reply

    Top Posts

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.