
ಮಂಗಳೂರು, ಸೆ. 03: ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ನಾಳೆ ತಾ.4, ಶುಕ್ರವಾರ, ಮಧ್ಯಾಹ್ನ 12-30ಕ್ಕೆ ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಎ.ಜೆ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗಣ್ಯ ಅತಿಥಿಗಳು, ಜನ ಪ್ರತಿನಿಧಿಗಳು ಹಾಗೂ ಇನ್ನಿತರ ಪ್ರಮುಖರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ತಿಳಿಸಿದ್ದಾರೆ.
ಬೆಳಿಗ್ಗೆ 9-00 ಕ್ಕೆ, “ಶ್ರೀ ಕೃಷ್ಣ ವರ್ಣ ವೈಭವ ” ಚಿತ್ರ ಕಲಾ ಸ್ಪರ್ಧೆ ಆರಂಭ.
10-30ಕ್ಕೆ ಮಹಿಳೆಯರು ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಸಾಮೂಹಿಕವಾಗಿ ಭರಣಿ ಪಾತ್ರೆಯಲ್ಲಿ ಕಡಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವುದು.
ಮಧ್ಯಾಹ್ನ 1-00 ಗಂಟೆಗೆ ಮಹಿಳೆಯರು ತಮ್ಮ ಮನೆಮಂದಿ ಬಂಧು ಬಳಗ ಇಷ್ಟ ಮಿತ್ರರೊಂದಿಗೆ ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ 6 ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕುತ್ತಾ ಅವರದೇ ಭಾಷೆಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವುದು.
ಮಧ್ಯಾಹ್ನ 2-00 ಗಂಟೆಗೆ ದೇವಸ್ಥಾನದ ಪ್ರಾಂಗಣದಲ್ಲಿ ಏಕಕಾಲದಲ್ಲಿ 12 ವೇದಿಕೆಗಳಲ್ಲಿ , 44 ವಿಭಾಗಗಳ ಸ್ಪರ್ಧೆ ಆರಂಭವಾಗಲಿದ್ದು , ರಾತ್ರಿ 12ಕ್ಕೆ ಅರ್ಘ್ಯ ಪ್ರದಾನ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ, (9845083736) ಇವರನ್ನು ಸಂಪರ್ಕಿಸ ಬಹುದು.
_Sathish Kapikad


