ಮಂಗಳೂರು: ನಗರದ ಪುರಭವನದಲ್ಲಿ “ಪ್ರಕೃತಿ ಸಂಭ್ರಮ 2026” ಹಾಗೂ “ಪ್ರಕೃತಿ ಪ್ರಶಸ್ತಿ 2026” ಎಂಬ ಅದ್ಧೂರಿ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಖ್ಯಾತ ತುಳು ಸಾಹಿತಿ ಮಹೇಂದ್ರನಾಥ್ ಸಾಲೆತ್ತೂರು ವಹಿಸಿದರು,ಧಾರ್ಮಿಕ ಕ್ಷೇತ್ರದ ಜಿ ಎ ಬೋಳೂರು ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮುಖಾಂತರ ಉದ್ಘಾಟಿಸಿದರು.

ಚೊಚ್ಚಲ ಪ್ರಕೃತಿ ಪ್ರಶಸ್ತಿಯನ್ನು ತುಳು ರಂಗ ಭೂಮಿಯ ಮೇರು ಕಲಾವಿದೆ ಹಾಗೂ ಹಿರಿಯ ಬಹುಭಾಷಾ ಚಲನಚಿತ್ರ ನಟಿ ಶ್ರೀಮತಿ ಸರೋಜಿನಿ ಶೆಟ್ಟಿಯವರಿಗೆ ಸಮರ್ಪಿಸಲಾಯಿತು,

ಸಾಧಕ ಸನ್ಮಾನವನ್ನು ಕರ್ನಾಟಕ ಸರಕಾರದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆಯಾದ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ ಅವರು ನೆರವೇರಿಸಿದರು.

ಪ್ರಶಸ್ತಿ ಪಡೆದ ಸರೋಜಿನಿ ಶೆಟ್ಟಿಯವರು ತಮ್ಮ ಪಾಲಿಗೆ ಬಂದ ಪ್ರಶಸ್ತಿಯನ್ನು ತನ್ನ ಕಲೆಗೆ ಬೆನ್ನೆಲುಬಾಗಿ ನಿಂತ ತನ್ನ ತಾಯಿಗೆ ಸಮರ್ಪಿಸಿ ಗದ್ಗದಿತರಾದರು.

ನಮ್ಮ ತುಳು ನಾಟಕ ರಂಗದ ಎಲ್ಲಾ ತಂಡಗಳು ಒಂದೇ ತಾಯ ಮಕ್ಕಳಂತೆ ಪರಸ್ಪರ ಸಹಕಾರದಿಂದ ಇರಬೇಕೆಂದು ಕಿವಿಮಾತು ಹೇಳಿದರು.ಅವರನ್ನು ಸನ್ಮಾನಿಸಿದ ಶ್ರೀಮತಿ ಪಕ್ಕಳ ಅವರು ಸರೋಜಿನಿ ಶೆಟ್ಟಿಯವರ ಸಾಧನೆಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಬೆಳುವಾಯಿ ನವೀನ್ ಕುಮಾರ್ ಹೆಗ್ಡೆ, ಉದ್ಯಮಿ ಲ| ಗಣೇಶ್ ಶೆಟ್ಟಿ, ನ್ಯಾಯವಾದಿಗಳು ಹಾಗೂ ಕನ್ನಡ ಜಾನಪದ ಪರಿಷತ್ ನ ಉಪಾಧ್ಯಕ್ಷರಾದ ಮೋಹನ್ ದಾಸ್ ರೈ, ಶ್ರೀಧರ್ ಅಮೀನ್ ಮಣಿಪುರ, ಯಶೋಧರ ಚೌಟ, ಸುರೇಶ್ ಆಚಾರ್ ದೇರಳಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಕೃತಿ ಕಲಾವಿದೆರ್ ತಂಡದ ಯಜಮಾನರಾದ ರಂಗಕೇಸರಿ ರಮೇಶ್ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸುವ ಜೊತೆ ಜೊತೆಗೆ ತಂಡ ಬೆಳೆದು ಬಂದ ಹಾದಿಯನ್ನು ಪರಿಚಯಿಸಿದರು.

ಹಿರಿಯ ಸಾಹಿತಿ ಮಹೇಂದ್ರನಾಥ್ ಸಾಲೆತ್ತೂರು ಅವರು ಹಿರಿಯ ನಟಿ ಸರೋಜಿನಿ ಶೆಟ್ಟಿಯವರ ಸಾಧನೆಗಳನ್ನು ನೆನಪಿಸಿ ಅಭಿನಂದನೆ ಸಲ್ಲಿಸುವುದರ ಜೊತೆ ,ತಂಡ ಹಿರಿಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಇಂದಿನ ತಲೆಮಾರಿಗೆ ಮಾದರಿ ಎಂದರು.

ನಮ್ಮ ಕುಡ್ಲ ವಾಹಿನಿಯ ಸುದ್ದಿ ವಾಚಕರಾದ ಡಾ| ಪ್ರೀಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು, ಗೋಪಿನಾಥ್ ಶೆಟ್ಟಿ ಕಾವೂರು ಅವರು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು.

ಬಳಿಕ “ರಂಗಕೇಸರಿ” ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದ ಪ್ರಕೃತಿ ಕಲಾವಿದೆರ್ ಕುಡ್ಲ ತಂಡದ ಕಲಾವಿದರು ಅಭಿನಯಿಸಿದ “ಕೃಷ್ಣಣ್ಣ ಬೇಗ ಬಲೆ” ಎಂಬ ತುಳು ಹಾಸ್ಯನಾಟಕ ಕಿಕ್ಕಿರಿದ ಜನಸಂದಣಿಯ ನಡುವೆ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

Sathish Kapikad

Share.
Leave A Reply

Exit mobile version