
ಮಂಗಳೂರು : ನಗರದ ಪದವ ಶಾಲೆ ಮುಂಭಾಗದಲ್ಲಿರುವ ಶ್ರೀನಿವಾಸ್ ಮಲ್ಯ ಉದ್ಯಾನವನದಲ್ಲಿ ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ಮ ದಿನಚರಣಾ ಸಮಿತಿ ನೇತೃತ್ವದಲ್ಲಿ ಆಧುನಿಕ ಪ್ರಾಂತ್ಯದ ಶಿಲ್ಪಿ ದಿ||ಉಳ್ಳಾಲ ಶ್ರೀನಿವಾಸ್ ಮಲ್ಯರವರ 125ನೇ ಜನ್ಮ ದಿನಾಚರಣೆಯನ್ನು ಮಲ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಶ್ರೀಯುತ ಬಿ.ರಾಮನಾಥ ರೈ ,ಜನ್ಮ ದಿನ ಆಚರಣಾ ಸಮಿತಿ ಸಂಚಾಲಕಿ ಶ್ರೀಮತಿ ಮಂಜುಳಾ ನಾಯಕ್ , ಮಲ್ಯ ಕುಟುಂಬಸ್ಥರಾದ ಉಳ್ಳಾಲ ನರಹರಿ ಮಲ್ಯ , ಅರುಂಧತಿ ಮಲ್ಯ, ನಂದನ್ ಮಲ್ಯ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮರಾಜ್ ಪೂಜಾರಿ , ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ , ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಎ ಗಫೂರ್, ಮೂಡದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ,ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ರವೂಫ್ , ಶಶಿಧರ್ ಹೆಗ್ಡೆ , ಅನಿಲ್ ಕುಮಾರ್, ನವೀನ್ ಡಿಸೋಜ , ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೋ, ಅಕಾಡೆಮಿಯ ಸದಸ್ಯ ಸಮರ್ಥ ಭಟ್ ,ಸಮಿತಿ ಅಧ್ಯಕ್ಷರಾದ ಟಿಸಿ ಗಣೇಶ್ , ನೀತು ಶರಣ್ , ರಾಜೇಶ್ ದೇವಾಡಿಗ , ಯೋಗೀಶ್ ನಾಯಕ್ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿದರು.
Sathish Kapikad