ಮಂಗಳೂರು: ದೇರಳಕಟ್ಟೆಯಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಜೈವಿಕ ವೈದ್ಯಕೀಯ ವಿಜ್ಞಾನ (ಬಯೋ ಮೆಡಿಕಲ್ ಸೈನ್ಸ್) ವಿಭಾಗದಲ್ಲಿ ಉನ್ನತ ಶೈಕ್ಷಣಿಕ ಸಾಧನೆಗಾಗಿ ಆರ್. ತನ್ವಿ ಚಿನ್ನದ ಪದಕವನ್ನು ಪಡೆದು ಕೊಂಡಿದ್ದಾರೆ.

ನಿಟ್ಟೆ ಕುಲಾಧಿಪತಿ ವಿಶಾಲ್ ಹೆಗ್ಡೆ, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿವೇಕ್ ಲಾಲ್ ನಿಟ್ಟೆ ವಿವಿಯ ಕುಲಪತಿ ಪ್ರೊ. ಎಂ. ಎಸ್. ಮೂಡಿತ್ತಾಯ, ಪ್ರೊ. ಚಾನ್ಸಲರ್ ಪ್ರೊ.ಡಾ.ಎಂ. ಶಾಂತರಾಮ ಶೆಟ್ಟಿ ಮೊದಲಾದವರಿದ್ದರು.

ಆರ್. ತನ್ವಿ ಹಿರಿಯ ಪತ್ರಕರ್ತ ರಾಮಕೃಷ್ಣ ಆರ್. ಮತ್ತು ಡಾ.ರೇಶ್ಮಾ ಜಿ. ಉಳ್ಳಾಲ್ ಪುತ್ರಿ.

Sathish Kapikad

Share.
Leave A Reply

Exit mobile version