
ಮಂಗಳೂರು : ನಗರದ ಬಜಿಲಕೇರಿ ಶ್ರೀ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಗುರುರಾಜ್ ಭಟ್ ರವರ ಮಾಲೀಕತ್ವದ ಗೋ – ಶಾಲೆಯಲ್ಲಿ ಸಾಮರಸ್ಯ ಮಂಗಳೂರು ನೇತೃತ್ವದಲ್ಲಿ ಗೋಪೂಜೆ ನಡೆಯಿತು.
ಈ ಸಂದರ್ಭ ಮಾತನಾಡಿದ ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಅವರು, 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋವನ್ನು ಪೂಜಿಸುವುದರಿಂದ ಸಕಲ ಪಾಪವೂ ನಿವಾರಣೆಯಾಗುತ್ತದೆ ಹಾಗೂ ಗೋಗ್ರಾಸವನ್ನು ಕೊಡುವುದರಿಂದ ಮಹಾನೈವೇದ್ಯದ ಸಮಪರ್ಣಾ ಫಲ ಸಿಗುತ್ತದೆ ಎಂಬ ನಂಬಿಕೆಯೂ ಇದೆ ಎಂದರು.
ಪೂಜೆಯಲ್ಲಿ ಸಂಘಟನೆಯ ಪ್ರಮುಖರಾದ ಯೋಗೀಶ್ ನಾಯಕ್ , ಸಮರ್ಥ್ ,ಭಟ್ , ಸಿತಾರಾ , ರಾಧಿಕಾ ನಾಯಕ್ , ನೀತ್ ಶರಣ್ , ರಾಜೇಶ್ ದೇವಾಡಿಗ , ಟಿಸಿ ಗಣೇಶ್ , ಸೀತಾರಾಮ್ ಶೆಟ್ಟಿ , ಸುನಿತಾ , ಸುನಂದಾ , ಮಾತಾಜಿ , ರತಿಕಾ ,ರಚಿತಾ , ಪುಷ್ಪ ಆರ್ ಶೆಟ್ಟಿ , ರುಕ್ಮಿಣಿ ಹಾಗೂ ಮೀರಾ ದೇವಿ, ಗಟು ಕವನ್, ಮೋಹನ್ ಕವನ್ ಉಪಸ್ಥಿತರಿದ್ದರು.
Sathish Kapikad