
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿ ವಿಜೇತ, ಕಲಾ ಕ್ಷೇತ್ರದ ಅಪ್ರತಿಮ ಸಾಧಕ ಮಂಗಳೂರಿನ ಕಂಡೆಟ್ಟು ನಿವಾಸಿ ಶ್ರೀ ಅತೀಶ್ ಎಸ್. ಶೆಟ್ಟಿ ಯವರಿಗೆ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಸನ್ಮಾನ ಕಾರ್ಯಕ್ರಮವು ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ತುಳುನಾಡಿನ ಈ ಯುವ ಪ್ರತಿಭೆ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. “ಮಿಥ್ಯ” ಚಿತ್ರದ ಮೂಲಕ ಅತ್ಯುತ್ತಮ ಬಾಲ ಕಲಾವಿದ ಎಂಬ ಪ್ರಶಸ್ತಿಗೆ ಭಾಜನರಾದ ಅತೀಶ್ ಶೆಟ್ಟಿಯವರ ಸಾಧನೆ ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಇವರು ಕಲಾ ಕ್ಷೇತ್ರ ಮಾತ್ರವಲ್ಲದೇ, ಕ್ರೀಡೆಯಲ್ಲೂ ಹಲವು ಸಾಧನೆ ಮಾಡಿದ್ದು, ಇಂತಹ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಿಂಚಲಿ, ಆ ಮೂಲಕ ತುಳುನಾಡಿನ ಕೀರ್ತಿ ಎಲ್ಲೆಡೆ ಪಸರಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್ ಹಾಗೂ ರಮೇಶ್ ಹೆಗ್ಡೆ, ಉಪಾಧ್ಯಕ್ಷರುಗಳಾದ ಅಜಯ್ ಕುಲಶೇಖರ್, ಮಂಗಳಾ ಆಚಾರ್, ಕಾರ್ಯದರ್ಶಿಗಳಾದ ಅಮಿತ್ ರಾಜ್, ಜಯ ಕುಮಾರ್, ಸುರೇಖಾ ಹೆಗ್ಡೆ, ಸುಮತಿ ಚಂದ್ರಶೇಖರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ರವಿಚಂದ್ರ ಹಾಗೂ ಪ್ರವೀಣ್ ನಿಡ್ಡೆಲ್, ಪಾಲಿಕೆಯ ನಿಕಟ ಪೂರ್ವ ಸದಸ್ಯರುಗಳಾದ ಕಾವ್ಯ ನಟರಾಜ್ ಆಳ್ವ, ಶಕೀಲಾ ಕಾವ, ಮನೋಹರ್ ಶೆಟ್ಟಿ ಕದ್ರಿ, ಮಂಡಲದ ಯುವ ಮೋರ್ಚಾದ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ, ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದೀಪಕ್ ಡಿಸೋಜಾ, ಸೇರಿದಂತೆ ಮಂಡಲದ ಪದಾಧಿಕಾರಿಗಳು, ಸದಸ್ಯರು, ಮೋರ್ಚಾಗಳ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಪ್ರಕೋಷ್ಠಗಳ ಪ್ರಮುಖರು, ಶಕ್ತಿಕೇಂದ್ರ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತ ಬಂಧುಗಳು ಭಾಗವಹಿಸಿದ್ದರು.
Sathish Kapikad