ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ ನೀಡಲಾಗಿದ್ದು ಇದರ ಯೋಜನೆಯನ್ನು ಅನುಷ್ಠಾನ ಗೊಳಿಸಲು ಮಂಗಳ ಕ್ರೀಡಾಂಗಣ ಅಭಿವೃದ್ಧಿಯ ವಿಸ್ತೃತ ಯೋಜನೆ ರೂಪಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿಯವರ ಮುಂದಾಳತ್ವದ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಯುವ ಸಬಲೀಕರಣದ ಉಪ ನಿರ್ದೇಶಕರಾದ ಶ್ರೀ ಪ್ರದೀಪ್ ಡಿಸೋಜಾ ಹಾಗೂ ಪಿ ಡಬ್ಲ್ಯೂ ಡಿ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರೀತಮ್, ಕಿರಿಯ ಅಭಿಯಂತರು ಹೇಮಂತ್ , ಅರ್ಕಿಟೆಕ್ಟ್ ವೆಂಕಟೇಶ್ ಪೈ, ಮಂಗಳ ಅಟ್ಲಟಿಕ್ ಕ್ಲಬ್ ನ ದಿನೇಶ್ ಕುಂದರ್, ಲಾರೆನ್ಸ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.

_Sathish Kapikad 

Share.
Leave A Reply

Exit mobile version