
ಮಂಗಳೂರು, ಸೆಪ್ಟೆಂಬರ್.14: ಬಂಟ್ಸ್ ಹಾಸ್ಟೆಲ್ ನಲ್ಲಿ ಸಿದ್ದಿ ವಿನಾಯಕ ಪ್ರತಿಷ್ಠಾನದಿಂದ ಗಣೇಶೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಗಣೇಶೋತ್ಸವ ಉದ್ಘಾಟನೆ ಮಾಡುವ ಯೋಗ ಸತತ 2ನೇ ಬಾರಿ ತನಗೆ ಒದಗಿ ಬಂದಿರುವುದು ತನ್ನ ಸುದೈವ ಎಂದು ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಮಾತನಾಡಿ, ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತದ ಆಶಯದಂತೆ ಪರಿಸರಕ್ಕೆ ಪೂರಕವಾಗಿ ಎಲ್ಲ ಗಣೇಶೋತ್ಸವಗಳು ನಡೆಯುವಂತಾಗಲಿ ಎಂದರು.
ಧ್ವಜಾವರೋಹಣಗೈದು ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಎಸ್.ಎಂ.ಅಡ್ಯoತಾಯ ಅವರು ಬಂಟ ಸಮುದಾಯಕ್ಕೆ ಶ್ರೀಮತ ಪರಂಪರೆಯ ಹಿನ್ನೆಲೆಯಿದ್ದು, ಶಿಕ್ಷಣ, ಆಡಳಿತ, ವೈದ್ಯಕೀಯ,ಕಾನೂನು ಮುಂತಾದ ಕ್ಷೇತ್ರಗಳಲ್ಲಿ ಇವರು ಸಮಾಜಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದರು.
ಮಾತೃ ಸಂಘದ ಮಾಜಿ ಉಪಾಧ್ಯಕ್ಷ ರವೀಂದ್ರನಾಥ ಜಿ ಹೆಗ್ಡೆ ನಳಿನಿ ಆರ್ ಹೆಗ್ಡೆ ತೆನೆ ವಿತರಿಸಿದರು.
ಅತಿಥಿಗಳಾಗಿ ಗೀತಾ ಅಡ್ಯoತಾಯ, ಮಾಳವಿಕಾ ಜಯಾನಂದ್, ದಂಬೆಕಾನ ಸದಾಶಿವ ರೈ, ಪದ್ಮನಾಭ ರೈ, ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಜೆ ಸತ್ಯಪ್ರಸಾದ್ ಶೆಟ್ಟಿ, ಶೇಖರ ಶೆಟ್ಟಿ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಮತ್ತಿತತರು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ ಅಡ್ಯಾರುಗುತ್ತು ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ದಂಪತಿಗಳನ್ನು ಹಾಗೂ ಬಾಲ ಸಂಗೀತ ಪ್ರತಿಭೆ ಅಜಿಂತ್ಯ ರೈ ಅವರನ್ನು ಸನ್ಮಾನಿಸಲಾಯಿತು.
_Sathish Kapikad