
ಮಂಗಳೂರು :ರಾಜ್ಯ ಹೈ ಕೋರ್ಟ್ ನ ಅಪರ ಸರಕಾರಿ ವಕೀಲ (ಎಜಿಎ) ರಾಗಿ ಚಿದಾನಂದ ಡಿ. ಬಂಟ್ವಾಳ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಇವರು ಮಾಣಿಯ ಜವುಳಿ ವ್ಯಾಪಾರಿ ದಿ.ಕೆ. ಯಂ ಗಿರಿಯಪ್ಪ ಪೂಜಾರಿ ಮಾಣಿ, ಮತ್ತು ಸೀತಮ್ಮ ರವರ ಪುತ್ರ ರಾಗಿರುತ್ತಾರೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬರಿಮಾರು, ಕರ್ನಾಟಕ ಹೈ ಸ್ಕೂಲ್ ಮಾಣಿ, ಶಾಲಾ ಶಿಕ್ಷಣ ಪೂರೈಸಿ ಮಂಗಳೂರು ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಪ್ರತಿಭಾವಂತರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದಾರೆ.
_Sathish Kapikad


