Close Menu
SK Media NewsSK Media News
    What's Hot

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ವಿಧಿವಶ

    July 18, 2026

    ಹೈ ಕೋರ್ಟ್ ಸರಕಾರಿ ವಕೀಲರಾಗಿ “ಚಿದಾನಂದ ಬಂಟ್ವಾಳ್ ” ನೇಮಕ

    July 18, 2026

    ದ.ಕ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ 

    July 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಮೀರಾ ಪಡಿಯಾರ್ ಸಾರಥ್ಯದಲ್ಲಿ ಜುಲೈ 11ರಂದು ಬೋಳೂರಿನಲ್ಲಿ ಹಿರಿಯ ನಾಗರಿಕರಿಗಾಗಿ “ಹಾಡಾಡೋಣ ಬನ್ನಿ” ಕಾರ್ಯಕ್ರಮ
    ಕರಾವಳಿ

    ಮೀರಾ ಪಡಿಯಾರ್ ಸಾರಥ್ಯದಲ್ಲಿ ಜುಲೈ 11ರಂದು ಬೋಳೂರಿನಲ್ಲಿ ಹಿರಿಯ ನಾಗರಿಕರಿಗಾಗಿ “ಹಾಡಾಡೋಣ ಬನ್ನಿ” ಕಾರ್ಯಕ್ರಮ

    July 1, 20261 Min Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ಖ್ಯಾತ ಸಮಾಜ ಸೇವಕಿ ಮೀರಾ ಪಡಿಯಾರ್ ಅವರ ಸಾರಥ್ಯದಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷವಾಗಿ “ಹಾಡಾಡೋಣ ಬನ್ನಿ” ಎಂಬ ಕೆರೋಕೆ ಕಾರ್ಯಕ್ರಮ ನಡೆಯಲಿದೆ. “ನಾದಸಂಗಮ” ಸಂಸ್ಥೆಯ ವತಿಯಿಂದ ಜುಲೈ 11ರಂದು ಶನಿವಾರ ಬೆಳಗ್ಗೆ 9:30 ರಿಂದ ಸಂಜೆ 5:30ರ ವರೆಗೆ ಬೋಳೂರಿನ ಜಾರಂದಾಯ ದೈವಸ್ಥಾನದ ಹತ್ತಿರ ಇರುವ ಕೆರೋಕೆ ಕ್ಲಬ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಮೀರಾ ಪಡಿಯಾರ್ ಅವರ ಸಾರಥ್ಯದ “ನಾದಸಂಗಮ” ಸಂಸ್ಥೆಯು ಸತತವಾಗಿ, ಸಂಗೀತಾಸಕ್ತರಿಗಾಗಿ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಖ್ಯಾತ ಗಾಯಕ ಎಸ್ಪಿಬಿ ಅವರ ಪುಣ್ಯ ಸ್ಮರಣೆಯಂದು ಸತತ 12 ಗಂಟೆಗಳ ಕಾಲ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿತ್ತು. ಆನಂತರದ ದಿನಗಳಲ್ಲಿ ಪಿಬಿ ಶ್ರೀನಿವಾಸ್-ರಾಜಕುಮಾರ್ ಜೋಡಿಯ ವಿಶೇಷ ಹಾಡುಗಳ ಗಾಯನ ಕಾರ್ಯಕ್ರಮವನ್ನು ವಿವಿಧ ಗಾಯಕರ ಮೂಲಕ ನೆನಪಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.

    ಈ ಕಾರ್ಯಕ್ರಮಗಳ ಯಶಸ್ಸಿನಿಂದ ಉತ್ತೇಜಿತರಾಗಿ ಪಿ ಸುಶೀಲ-ಎಸ್ ಜಾನಕಿ ಇವರಿಬ್ಬರ ಯಶಸ್ವಿ ಹಾಗೂ ಸುಮಧುರ ಹಾಡುಗಳನ್ನು ನೆನಪಿಸುವ ಮತ್ತೊಂದು ಸಂಗೀತಸಂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ತದನಂತರ ಮಹಿಳಾ ಗಾಯಕಿಯರಿಗೆಂದೇ ವಿಶೇಷವಾಗಿ ಒಂದು ಕೆರೋಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆನಂತರ ಕೇವಲ ಪುರುಷ ಹವ್ಯಾಸಿ ಗಾಯಕರಿಗಾಗಿಯೇ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು.

    ಇದೀಗ ನಾದಸಂಗಮ ಸಂಸ್ಥೆಯು ಹಿರಿಯ ನಾಗರಿಕರಿಗಾಗಿ ಒಂದು ವಿಶೇಷವಾದ “ಹಾಡಾಡೋಣ ಬನ್ನಿ” ಎಂಬ ಕೆರೋಕೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ.

    ಈ ಕಾರ್ಯಕ್ರಮದಲ್ಲಿ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಒಟ್ಟು 50 ಜನ ಹಿರಿಯ ನಾಗರಿಕರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಟ್ಟು 100 ಹಾಡುಗಳನ್ನು 50 ಮಂದಿ ಸದಸ್ಯರು ಹಾಡಲಿದ್ದಾರೆ.

    ಗೋಪಿನಾಥ ಕಾಮತ್ ಮತ್ತು ಮಮತಾ ಶೆಟ್ಟಿ ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದ್ದಾರೆ. ಅಲ್ಲದೆ ಎಲ್ಲಾ ಸಂಗೀತ ಹಾಡುಗಾರರ ಸಹಕಾರವೂ ಇದೆ ಎಂದು ಮೀರಾ ಪಡಿಯಾರ್ ತಿಳಿಸಿದ್ದಾರೆ.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleಭಾರೀ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ 
    Next Article ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ನಾಳೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

    Related Posts

    ಕರಾವಳಿ

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ವಿಧಿವಶ

    July 18, 2026
    ಕರಾವಳಿ

    ಹೈ ಕೋರ್ಟ್ ಸರಕಾರಿ ವಕೀಲರಾಗಿ “ಚಿದಾನಂದ ಬಂಟ್ವಾಳ್ ” ನೇಮಕ

    July 18, 2026
    ಕರಾವಳಿ

    ದ.ಕ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ 

    July 17, 2026
    Add A Comment
    Leave A Reply Cancel Reply

    Top Posts

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.