Close Menu
SK Media NewsSK Media News
    What's Hot

    ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    May 29, 2026

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 2026

    ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    May 28, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರಾವಳಿ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ನೇತೃತ್ವದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ.
    ಕರಾವಳಿ

    ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ನೇತೃತ್ವದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ.

    May 22, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು ಮಹಾನಗರದ ಜೆಪ್ಪು ಕಡೆಕಾರು, ಜೆಪ್ಪಿನಮೊಗರು ನೇತ್ರಾವತಿ ನದಿ ತೀರದ ಪ್ರದೇಶದಲ್ಲಿನ ನೇತ್ರಾವತಿ ಸಭಾಂಗಣ ದಲ್ಲಿ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ ನೀಡುವ ಸಮಾರಂಭ ಜರುಗಿತು.

    ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಿಗಾಗಿ ನಿರ್ಮಿಸಲಾದ ನೇತ್ರಾವತಿ ಸಭಾಭವನ, ಪಾಲೇಮಾರ್ ಕನ್ವೆನ್ನನ್ ಸೆಂಟರ್, ಪಾಲೇಮಾ‌ರ್ ಫಾರ್ಮ್ಸ್ ಮತ್ತು ಪಾಲೇಮಾ‌ರ್ ಗಾರ್ಡನ್ ಸೇರಿ ನಾಲ್ಕು ಸೌಲಭ್ಯಗಳ ಲೋಕಾರ್ಪಣೆಗೆ ಸಿದ್ಧತೆ ನಡೆದಿದ್ದು, ಅಧಿಕೃತ ಲೋಕಾರ್ಪಣೆಯು ಶನಿವಾರ, ಮೇ 23, 2026ರಂದು ನಡೆಯಲಿದೆ. ಅದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆಗೆ ಚಾಲನಾ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಯೋಗಿಶ್ ಅವರು ನೆರವೇರಿಸಿದರು. ಬಳಿಕ ವೇದಿಕೆಯಲ್ಲಿ ಗಣ್ಯರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಲೋಕಾರ್ಪಣೆಗೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಪಾಲೇಮಾ‌ರ್ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕದ್ರಿ ನವನೀತ ಶೆಟ್ಟಿಯವರು ನೆರವೇರಿಸಿದರು.

    ಮಾತೆ ಶಕುಂತಲಾ ನರೇಂದ್ರನಾಥ ಕೋಟೆಕಾರ್ ಮಾತನಾಡಿ, ಚಾಲನೆ ಒಂದು ದೈವಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಸುಮಾರು 40 ವರ್ಷಗಳ ಬಳಿಕ ಮತ್ತೆ ನೇಮೋತ್ಸವ ನಡೆದಿರುವುದು ಕಾರ್ಣಿಕ ಎಂದು ಅವರು ಹೇಳಿದರು. ಈ ಸ್ಥಳದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ದೈವಿಕ ಶಕ್ತಿ ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಈ ಕ್ಷೇತ್ರದ ಮಹಿಮೆ ಆದ್ಯಾತ್ಮಿಕ ಚಿಂತನೆಯಿಂದ ಬಂದಿರುವುದು ಎಂದು ಹೇಳಿದರು. ಸಭಾಂಗಣಗಳು ಕೇವಲ ಸಮಾರಂಭಗಳ ಸ್ಥಳವಲ್ಲ, ಅವು ಆತ್ಮೀಯತೆ ಮತ್ತು ಸಮಾಜದ ಅಭಿವೃದ್ಧಿಗೆ ಕೇಂದ್ರವಾಗಬೇಕು ಎಂದು ಹೇಳಿದರು. ಲೋಕ ಸಮೃದ್ಧಿಯತ್ತ ಸಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

    ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಈ ಕ್ಷೇತ್ರದ ಪವಿತ್ರತೆಯನ್ನು ಅನುಭವಿಸಬೇಕು ಎಂದು ಹೇಳಿದರು. ಧರ್ಮ ಮತ್ತು ಪ್ರೀತಿಯ ಅಡಿಪಾಯದಲ್ಲಿ ಸಮಾಜ ಬೆಳೆಯಬೇಕು ಎಂದು ಹೇಳಿದರು. ಕೃಷ್ಣ ಜೆ. ಪಾಲೇಮಾ‌ರ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

    ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, ನೇತ್ರಾವತಿ ತಟದಲ್ಲಿರುವ ಈ ಸಭಾಭವನಗಳು ಸಾರ್ವಜನಿಕ ಉಪಯೋಗಕ್ಕೆ ಸಮರ್ಪಿತವಾಗಿವೆ ಎಂದು ಹೇಳಿದರು. ತಮ್ಮ ಕುಟುಂಬದ ಹಿನ್ನೆಲೆ ಹಾಗೂ ಈ ಸ್ಥಳದೊಂದಿಗೆ ಇರುವ ಸಂಬಂಧವನ್ನು ಹಂಚಿಕೊಂಡರು. ಸಾಂಸ್ಕೃತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಈ ಯೋಜನೆಗಳು ಒಂದು ಮಹತ್ವದ ಸಾಧನೆ ಎಂದು ಹೇಳಿದರು. ಪಾಲೇಮಾರ್ ಅವರನ್ನು ತಮ್ಮ ರಾಜಕೀಯ ಗುರುಗಳಾಗಿ ಗುರುತಿಸಿ, ಸಮಾಜಮುಖಿ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಈ ರೀತಿಯ ಯೋಜನೆಗಳು ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleಗಜಾನನ ಕ್ರಿಕೆಟರ್ಸ್’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ : ಶುಭ ಹಾರೈಸಿದ ಸ್ಪೀಕರ್ ಯು.ಟಿ ಖಾದರ್
    Next Article ಬಡತನ ನಿರ್ಮೂಲನೆ, ಸಮಾಜದಲ್ಲಿ ಸಮಾನತೆಗೆ ಶಿಕ್ಷಣ ಪ್ರಮುಖ ಅಸ್ತ್ರ. ಶಿಕ್ಷಣಕ್ಕೆ ಆದ್ಯತೆ ನೀಡುವ ಕೃಷ್ಣ ಜೆ. ಪಾಲೆಮಾರ್ ಅವರ ಗುಣ ಶ್ಲಾಘನೀಯ : ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ 

    Related Posts

    ಕರಾವಳಿ

    ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    May 29, 2026
    ಅಂತಾರಾಷ್ಟ್ರೀಯ

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 2026
    ಅಂತಾರಾಷ್ಟ್ರೀಯ

    ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    May 28, 2026
    Add A Comment
    Leave A Reply Cancel Reply

    Top Posts

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 2026

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ 

    May 21, 2026
    About Us
    About Us

    Lorem Ipsum is simply dummy text of the printing and typesetting industry. Lorem Ipsum has been the industry's standard dummy text ever since the 1500s,

    Email : skmedianews@gmail.com
    Phone : +91 95914 89084

    Most Popular

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 2026

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ 

    May 21, 2026
    Our Picks

    ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    May 29, 2026

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 2026

    ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    May 28, 2026
    Facebook X (Twitter) Instagram Pinterest
    • ಮುಖಪುಟ
    • ಕರಾವಳಿ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.