Close Menu
SK Media NewsSK Media News
    What's Hot

    ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    May 29, 2026

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 2026

    ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    May 28, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರಾವಳಿ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಗಜಾನನ ಕ್ರಿಕೆಟರ್ಸ್’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ : ಶುಭ ಹಾರೈಸಿದ ಸ್ಪೀಕರ್ ಯು.ಟಿ ಖಾದರ್
    ಕರಾವಳಿ

    ಗಜಾನನ ಕ್ರಿಕೆಟರ್ಸ್’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ : ಶುಭ ಹಾರೈಸಿದ ಸ್ಪೀಕರ್ ಯು.ಟಿ ಖಾದರ್

    May 22, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ `ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದೆ.

    ಭಾರತ್ ಸಿನಿಮಾಸ್ ನಲ್ಲಿ ಸಿನಿಮಾದ ಬಿಡುಗಡೆ ಸಮಾರಂಭ ಜರಗಿತು. ಅತಿಥಿಗಳು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.

    ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಮಾತನಾಡಿ ತುಳು ಸಿನಿಮಾ ರಂಗದಲ್ಲಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಕಿರಿಯರು, ಹೊಸಬರು ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಯುವ ಪ್ರತಿಭಾವಂತರು ಸಿನಿಮಾರಂಗದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಚೆನ್ನಾಗಿ ಆಡಲಿ ಎಂದರು.

    ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಗಜಾನನ ಕ್ರಿಕೆಟರ್ಸ್ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರೇಕ್ಷಕರು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಿರ್ಮಾಪಕ ಪ್ರಜ್ವಲ್ ಶೆಟ್ಟಿ, ರೋಹನ್ ಪಿರೇರ, ಸಂತೋಷ್ ಲಾಡ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.

    ಉದ್ಯಮಿ ಮೈಕಲ್ ಡಿ ಸೋಜ ಶುಭ ಹಾರೈಸಿದರು. ಸಮಾರಂಭದಲ್ಲಿ ಕಲಾ ನಿರ್ದೇಶಕ ತಮ್ಮಲಕ್ಷ್ಮಣ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೊಗೀಶ್ ಶೆಟ್ಟಿ ಜಪ್ಪು, ತೋನ್ಸೆ ಪುಷ್ಕಳ್ ಕುಮಾರ್, ಭೋಜರಾಜ್ ವಾಮಂಜೂರು, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಲಂಚುಲಾಲ್, ನವೀನ್ ಶೆಟ್ಟಿ ಆರ್ಯನ್, ದಯಾನಂದ ಹೆಜಮಾಡಿ, ನವೀನ್ ಶೆಟ್ಟಿ ಎಡ್ಮೆಮಾರ್, ವಿನೀತ್ ಕುನಾರ್, ನಿರ್ದೇಶಕ ಕೀರ್ತನ್ ಭಂಡಾರಿ, ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ, ಸಹನಿರ್ಮಾಪಕರಾದ ರೋಹನ್ ಪಿರೇರಾ, ಸಂತೋಷ್ ಲಾಡ್, ಶೈಲಶ್ರಿ ಮುಲ್ಕಿ, ರೂಪ ವರ್ಕಾಡಿ, ಅನ್ವಿತಾ ಸಾಗರ, ಸಮತಾ ಅಮೀನ್, ಸಂಗೀತ ನಿರ್ದೇಶಕ ಸೃಜನ್ ಕುಮಾರ್ ತೋನ್ಸೆ, ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ‌ ನಿರ್ವಹಿಸಿದರು.

    ಗಜಾನನ ಕ್ರಿಜೆಟಸ್೯ ತುಳು ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಕುಂದಾಪುರ, ಮಣಿಪಾಲ ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ ಮೊದಲಾದ ಕಡೆಗಳಲ್ಲಿ ಬಿಡುಗಡೆಗೊಂಡಿದೆ.

    ಇದು ತುಳು ಭಾಷೆಯಲ್ಲಿನ ದೊಡ್ಡ ಬಜೆಟ್ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕತೆ ಹೊಂದಿದೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಬಿಗು ಕತೆ ಒಳಗೊಂಡಿದೆ.

    ಕೀರ್ತನ್ ಭಂಡಾರಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಪ್ರಜ್ವಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಅನ್ವಿತಾ ಸಾಗರ್, ಸಮತಾ ಅಮೀನ್, ಸರ್ವೋತ್ತಮ ಶೆಟ್ಟಿ ಅಬುದಾಭಿ, ವಾಲ್ಟರ್ ನಂದಳಿಕೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ರೂಪ ವರ್ಕಾಡಿ, ಲಂಚುಲಾಲ್, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ, ಕರಣ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಫರಂಗಿಪೇಟೆ ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ -ಸಾಧಕರಿಗೆ ಸನ್ಮಾನ :ಸಮಾಜ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಬೇಕಾಗಿದೆ : ಕಮಲ ರಮೇಶ್.
    Next Article ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ನೇತೃತ್ವದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ.

    Related Posts

    ಕರಾವಳಿ

    ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    May 29, 2026
    ಅಂತಾರಾಷ್ಟ್ರೀಯ

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 2026
    ಅಂತಾರಾಷ್ಟ್ರೀಯ

    ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    May 28, 2026
    Add A Comment
    Leave A Reply Cancel Reply

    Top Posts

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 2026

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ 

    May 21, 2026
    About Us
    About Us

    Lorem Ipsum is simply dummy text of the printing and typesetting industry. Lorem Ipsum has been the industry's standard dummy text ever since the 1500s,

    Email : skmedianews@gmail.com
    Phone : +91 95914 89084

    Most Popular

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 2026

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ 

    May 21, 2026
    Our Picks

    ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    May 29, 2026

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 2026

    ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    May 28, 2026
    Facebook X (Twitter) Instagram Pinterest
    • ಮುಖಪುಟ
    • ಕರಾವಳಿ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.