Close Menu
SK Media NewsSK Media News
    What's Hot

    ಸಾವಿರದಂಚಿಗೆ ದಾಪುಗಾಲಿಡುತ್ತಿರುವ ತುಳುನಾಡಿನ ದೈವಿಕ ನಂಬಿಕೆಯ ರಂಗರೂಪ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ‘ಶಿವಧೂತ ಗುಳಿಗ” ನಾಟಕ

    November 22, 2026

    ರೋಟರಿ ಸಂಸ್ಥೆಯ ಸೇವೆ ದೇವರು ಮೆಚ್ಚುವಂಥ ಕಾರ್ಯ : ರೋಟರಿ 26ನೇ ವಾರ್ಷಿಕ ಚಿಣ್ಣರ ಉತ್ಸವ ಉದ್ಘಾಟಿಸಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

    November 22, 2026

    ನ್ಯಾಯಯುತ ಬೇಡಿಕೆಗಳಿಗಾಗಿ ಆಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟುವುದು ಗ್ಯಾರಂಟಿ : ಸತೀಶ್ ಕುಂಪಲ ಆಕ್ರೋಶ 

    November 21, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home »  ಆಡಳಿತ ವೈಫಲ್ಯದಿಂದ ರಾಜ್ಯಕ್ಕೆ ಆರ್ಥಿಕ ಸಂಕಷ್ಟ ತಂದಿಟ್ಟ ಕಾಂಗ್ರೆಸ್ ಸರ್ಕಾರ – ಬೆಲೆ ಏರಿಕೆ ಮಾಡಿ ಜನರ ತೆರಿಗೆ ಹಣದಿಂದ ಗ್ಯಾರಂಟಿ ಕೊಡುವ ಸ್ಥಿತಿ : ಆರ್. ಅಶೋಕ್ ವಾಗ್ದಾಳಿ
    ಕರಾವಳಿ

     ಆಡಳಿತ ವೈಫಲ್ಯದಿಂದ ರಾಜ್ಯಕ್ಕೆ ಆರ್ಥಿಕ ಸಂಕಷ್ಟ ತಂದಿಟ್ಟ ಕಾಂಗ್ರೆಸ್ ಸರ್ಕಾರ – ಬೆಲೆ ಏರಿಕೆ ಮಾಡಿ ಜನರ ತೆರಿಗೆ ಹಣದಿಂದ ಗ್ಯಾರಂಟಿ ಕೊಡುವ ಸ್ಥಿತಿ : ಆರ್. ಅಶೋಕ್ ವಾಗ್ದಾಳಿ

    November 19, 20263 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಸುರತ್ಕಲ್, ನ. 19 : ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಕೊಡಬೇಕಿತ್ತು, ಆದರೆ ಇದೀಗ ಸರ್ಕಾರವೇ ಪ್ರತಿಯೊಂದಕ್ಕೂ ಜನರಿಂದ ತೆರಿಗೆ ಹಣ ಹೆಚ್ಚು ಹೆಚ್ಚು ಪಡೆದು ಗ್ಯಾರಂಟಿ ಕೊಡುವ ಸ್ಥಿತಿಗೆ ಬಂದಿದೆ. ಆಡಳಿತ ವೈಫಲ್ಯದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಸುರತ್ಕಲ್‌ನಲ್ಲಿ ನಡೆದ ಜನಾಂದೋಲನ – ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ದರ ಏರಿಕೆ ಮತ್ತು ತೆರಿಗೆಯ ಮೂಲಕ ಜನರನ್ನು ಲೂಟಿ ಮಾಡಿ ಬದುಕಲು ಆಗದಂತಹ ಸ್ಥಿತಿಗೆ ತಂದಿಟ್ಟಿದೆ. ನಿಮ್ಮದು ಇನ್ನು ಒಂದು ವರ್ಷ ಮಾತ್ರ ಆಡಳಿತವಿದೆ, ಜನರು ಬದಲಾವಣೆ ಬಯಸಿದ್ದಾರೆ. ಒಂದು ವರ್ಷದಲ್ಲಿ ಜನರಿಗೆ ಆದಷ್ಟು ಒಳಿತು ಮಾಡಿ ಎಂದು ಅವರು ಹೇಳಿದರು.

    ಒಂದೆಡೆ ಬೆಲೆ ಏರಿಕೆಯ ನಡುವೆ ಜನತೆ ನೆಮ್ಮದಿ ಕಳೆದುಕೊಂಡಿರುವಾಗ ಇನ್ನೊಂದೆಡೆ ಹಿಂದೂ ಸಮಾಜ ಗೌರವಿಸುವ ಗೋವುಗಳ ರಕ್ಷಣೆಯ ಬದಲು ಬಿಜೆಪಿ ಸರ್ಕಾರ ತಂದಿದ್ದ ಕಠಿಣ ಗೋಹತ್ಯೆ ಕಾಯ್ದೆಯನ್ನು ವಾಪಸ್ ಪಡೆದು ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಮತಾಂತರ ಕಾಯ್ದೆಯನ್ನು ವಾಪಸ್ ಪಡೆಯುತ್ತಿದೆ. ಸರ್ಕಾರ ಅಭಿವೃದ್ಧಿ ಕಾರ್ಯ ಬಿಟ್ಟು ಗೂಂಡಾಗಿರಿ, ಕೊತ್ವಾಲ್ ಮಾದರಿಯ ಆಡಳಿತವನ್ನು ಡಿ.ಕೆ. ಶಿವಕುಮಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಿಷ್ಠ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನಲ್ಲಿ ಆಡಳಿತ ನಡೆಸಿದರೂ ಸ್ಟಿಂಗ್ ಆಪರೇಷನ್ ನಡೆಸಿ ಧ್ವನಿ ಎತ್ತದಂತೆ ಮಾಡಿದ್ದಾರೆ ಎಂದರು.

    ಇನ್ನೊಂದೆಡೆ ರಾಹುಲ್ ಗಾಂಧಿ ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಯ ಬಳಿಕ ಸಂಸಾರದ ಗುಟ್ಟುಗಳನ್ನು ಉಪರಾಷ್ಟ್ರಪತಿಗಳು, ನ್ಯಾಯಾಧೀಶರು, ಪ್ರತಿಷ್ಠಿತ ಜನರ ಮುಂದೆ ಸಾರ್ವಜನಿಕವಾಗಿ ಬೆತ್ತಲು ಮಾಡುತ್ತಿದ್ದಾರೆ. ಇವರು ರಾಷ್ಟ್ರೀಯ ಪಕ್ಷದ ವಿಪಕ್ಷ ನಾಯಕನಾಗಿರಲು ಯೋಗ್ಯರಲ್ಲ. ಪ್ರಧಾನಿ ಮೋದಿಯವರ ನಾಯಕತ್ವ ಗುಣಕ್ಕೂ ರಾಹುಲ್ ಗಾಂಧಿಯವರ ನಾಯಕತ್ವಕ್ಕೂ ತುಲನೆ ಮಾಡಲು ಅಸಾಧ್ಯ ಎಂದು ಹೇಳಿದರು.

    ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ 5ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ವಿಧವಾ ವೇತನ, ಪಿಂಚಣಿ, ವೇತನಗಳು ಸಿಗುತ್ತಿತ್ತು.ಅಭಿವೃದ್ಧಿ ಕಾರ್ಯಗಳನ್ನು ಸಾವಿರಾರು ಕೋಟಿ ರೂಪಾಯಿಯಲ್ಲಿ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಒಂದೇ ಒಂದು ಹಕ್ಕುಪತ್ರ ಕೊಡಲಾಗಲಿಲ್ಲ, ಹೊಸ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಹಾಲಿನ ದರದಿಂದ ಹಿಡಿದು ಪ್ರತಿಯೊಂದರ ಬೆಲೆ ಏರಿಕೆ ಮಾಡಿ ಜನರಿಗೆ ನೆಮ್ಮದಿಯ ಬದುಕು ಕೊಡದೆ ಅತಂತ್ರ ಸ್ಥಿತಿಗೆ ತಳ್ಳಿದೆ. ಇದನ್ನು ಜನತೆ ಮರೆಯಲಾರರು ಎಂದು ಕಿಡಿಕಾರಿದರು.

    ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ದುರಾಡಳಿತ ನಡೆಸುತ್ತಿದ್ದು ಕರ್ನಾಟಕದ ಗೌರವಕ್ಕೆ ಧಕ್ಕೆ ಬಂದಿದೆ. ಬಿಜೆಪಿ ಮತ್ತೆ ರಾಜ್ಯದ ಅಸ್ಮಿತೆಯನ್ನು ಉಳಿಸಲು ಪ್ರತಿ ಗ್ರಾಮದಲ್ಲೂ ಹೋರಾಟ ನಡೆಸಲಿದೆ ಎಂದರು.

    ಕಾರ್ಯಕ್ರಮದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯ ಬಾಲಕೃಷ್ಣ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಮುಖರಾದ ಮುನಿಸ್ವಾಮಿ ರಾಜೇಶ್, ತಿಲಕ್ ರಾಜ್ ಕೃಷ್ಣಾಪುರ, ಕವಿತಾ ಸನಿಲ್, ಪ್ರೇಮಾನಂದ ಶೆಟ್ಟಿ, ಯತೀಶ್ ನಂದನ್ ಮಲ್ಯ, ವಿಕಾಸ್ ಪುತ್ತೂರು, ಮಂಜುಳಾ ರಾವ್, ಶ್ವೇತಾ ಕುಮಾರಿ, ಶಹನವಾಜ್ ಹುಸೈನ್, ಜೇಸಿನ್ ಡಿಸೋಜಾ, ಮಾಜಿ ಕಾರ್ಪೊರೇಟರ್ಗಳು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

    ಮಂಗಳೂರು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಸ್ವಾಗತಿಸಿದರು. ಪುಷ್ಪರಾಜ್ ಮುಕ್ಕ ನಿರೂಪಿಸಿದರು. ಸಭೆಗೂ ಮುನ್ನ ಸುರತ್ಕಲ್ ಕಟ್ಲದಿಂದ ಜಂಕ್ಷನ್ ವರೆಗೆ ಪಾದಯಾತ್ರೆ ನಡೆಯಿತು.

    ಜನಾಂದೋಲನ ಸಭೆಯಲ್ಲಿನ ಪ್ರಮುಖ ಅಂಶಗಳು :

    ಸುರತ್ಕಲ್‌ನಲ್ಲಿ ಬಿಜೆಪಿ ಮಂಗಳೂರು ಉತ್ತರ ಮಂಡಲದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು.

    ಮೂರು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ತೆರಿಗೆ ಹೆಚ್ಚಳ, ಗ್ಯಾರಂಟಿ ಅನುಷ್ಠಾನ ವೈಫಲ್ಯ ಎಂದು ಆರೋಪ.

    ಹಾಲು, ಪೆಟ್ರೋಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ. ಉಚಿತ ಬಸ್, ಗೃಹಲಕ್ಷ್ಮಿ ಹೆಸರಿನಲ್ಲಿ ಕೊಟ್ಟು ತೆರಿಗೆ ಮೂಲಕ ವಸೂಲಿ ಮಾಡಲಾಗುತ್ತಿದೆ ಎಂಬ ಟೀಕೆ.

    ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಲ್ಲ, ಐದು ತಿಂಗಳಿಂದ ಪಿಂಚಣಿ ಬಾಕಿ, ಗ್ಯಾರಂಟಿಗೆ ಹಣವಿಲ್ಲದೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ವಾಗ್ದಾಳಿ.

    ಡಿ.ಕೆ. ಶಿವಕುಮಾರ್ ವಿರುದ್ಧ ದುಂದು ವೆಚ್ಚ, ದುಬಾರಿ ಶಾಲು, ಭೋಜನಕೂಟದ ಆರೋಪ. ಹಾವೇರಿಯಲ್ಲಿ 300 ಮಕ್ಕಳಿಗೆ ಬಿಸಿಯೂಟ ಇಲ್ಲ ಎಂಬ ಟೀಕೆ.

    ಮೋದಿ ಮಾದರಿ ಆಡಳಿತ ಕಲಿಯಲು ಸಲಹೆ, ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಹೋರಾಟದ ಎಚ್ಚರಿಕೆ,

    “ಲೂಟಿಕೋರ ಡಿ.ಕೆ.” ಘೋಷಣೆಗಳೊಂದಿಗೆ ಆಕ್ರೋಶ.

    Sathish Kapikad 

     

    Share. Facebook Twitter Pinterest LinkedIn Email WhatsApp
    Previous Articleಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಮಾಸಿಕ ಸಭೆ :ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ 
    Next Article ರಾಜ್ಯದಲ್ಲಿ 2.60 ಕೋಟಿ ಸಹಕಾರ ಸಂಘಗಳ ಸದಸ್ಯರಿರುವುದು ಸಹಕಾರ ಕ್ಷೇತ್ರದ ಮೇಲೆ ಜನತೆ ಇಟ್ಟಿರುವ ನಂಬಿಕೆಗೆ ಸಾಕ್ಷಿ : ಮಂಗಳೂರಿನಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಸಹಕಾರ ಸಚಿವ ಲಕ್ಷ್ಮಣ ಸವದಿ

    Related Posts

    ಕರಾವಳಿ

    ಸಾವಿರದಂಚಿಗೆ ದಾಪುಗಾಲಿಡುತ್ತಿರುವ ತುಳುನಾಡಿನ ದೈವಿಕ ನಂಬಿಕೆಯ ರಂಗರೂಪ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ‘ಶಿವಧೂತ ಗುಳಿಗ” ನಾಟಕ

    November 22, 2026
    ಕರಾವಳಿ

    ರೋಟರಿ ಸಂಸ್ಥೆಯ ಸೇವೆ ದೇವರು ಮೆಚ್ಚುವಂಥ ಕಾರ್ಯ : ರೋಟರಿ 26ನೇ ವಾರ್ಷಿಕ ಚಿಣ್ಣರ ಉತ್ಸವ ಉದ್ಘಾಟಿಸಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

    November 22, 2026
    ಕರಾವಳಿ

    ನ್ಯಾಯಯುತ ಬೇಡಿಕೆಗಳಿಗಾಗಿ ಆಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟುವುದು ಗ್ಯಾರಂಟಿ : ಸತೀಶ್ ಕುಂಪಲ ಆಕ್ರೋಶ 

    November 21, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.