Close Menu
SK Media NewsSK Media News
    What's Hot

    ಮಂಗಳೂರಿನ ಪತ್ರಕರ್ತರಾದ ರೋನ್ಸ್ ಬಂಟ್ವಾಳ, ರಾಜೇಶ್ ದಡ್ಡಂಗಡಿ, ಶಂಶೀರ್ ಬುಡೋಳಿಯವರಿಗೆ ‘ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’

    November 18, 2026

    ನ.20ರಂದು ಮಂಗಳೂರಿನಲ್ಲಿ  ಅಪ್ರತಿಮ ಸಾಮಾಜ ಸುಧಾರಕ, *ಕುದ್ಮುಲ್ ರಂಗರಾಯರ* ಬದುಕು ಮತ್ತು ಸಾಧನೆಗಳನ್ನು ಬಿಂಬಿಸುವ ತುಳು ನಾಟಕ “*ಮಹಾತ್ಮ ಕುದ್ಮುಲ್*”

    November 18, 2026

    ದುಬೈಯಲ್ಲಿ ‘ದುಬೈ ಯಕ್ಷೋತ್ಸವ–2026’ – ಶ್ರೀ ಹರಿಲೀಲಾಮೃತಂ” ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆ

    November 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾಸ್ಪತ್ರೆ ಪ್ರಶಸ್ತಿಗೆ ಆಯ್ಕೆ : ಗರ್ಭಪಾತಾ ನಂತರದ ತಾಯಿ ಮರಣವನ್ನು ಶೂನ್ಯಕ್ಕೆ ತಂದ ಸಾಧನೆ 
    ಕರಾವಳಿ

    ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾಸ್ಪತ್ರೆ ಪ್ರಶಸ್ತಿಗೆ ಆಯ್ಕೆ : ಗರ್ಭಪಾತಾ ನಂತರದ ತಾಯಿ ಮರಣವನ್ನು ಶೂನ್ಯಕ್ಕೆ ತಂದ ಸಾಧನೆ 

    October 31, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಲೇಡಿಗೋಷನ್ ಆಸ್ಪತ್ರೆಯು ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾಸ್ಪತ್ರೆ ಪ್ರಶಸ್ತಿಗೆ ಆಯ್ಕೆಯಾಗಿದೆ.

    2025-26ರಲ್ಲಿ ಕಾನೂನುಬದ್ಧವಾಗಿ ನಡೆದ ಗರ್ಭಪಾತ ಮತ್ತು ಅದರ ನಂತರದ ಆರೈಕೆಯಲ್ಲಿ ಶೇಕಡ ನೂರರಷ್ಟು ತಾಯಿ ಆರೋಗ್ಯವನ್ನು ಕಾಪಾಡಿ ತಾಯಿ ಮರಣವನ್ನು ಶೂನ್ಯಕ್ಕೆ ತಂದ ಸಾಧನೆಗಾಗಿ ಲೇಡಿಗೋಷನ್ ಆಸ್ಪತ್ರೆ ಈ ಪ್ರಶಸ್ತಿಗೆ ಭಾಜನವಾಗಿದೆ.

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಐಪಾಸ್ ಫೌಂಡೇಶನ್ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಲೇಡಿಗೋಷನ್ ಆಸ್ಪತ್ರೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.

    *ಗುಣಮಟ್ಟದ ತಾಯಿ ಮಗುವಿನ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದ ದಕ್ಷಿಣಕನ್ನಡ ಜಿಲ್ಲಾ ಸರಕಾರಿ ಲೇಡಿಗೋಷನ್ ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಮತ್ತೆ ಅತ್ಯುನ್ನತ ಸ್ಥಾನದಲ್ಲಿ ನಿಂತು ಮತ್ತೊಮ್ಮೆ ತನ್ನ ಘನತೆಯನ್ನು ಎತ್ತಿ ತೋರಿಸಿದೆ.ಅನೇಕ ವಿನೂತನ ಕಾರ್ಯಕ್ರಮ ಹಾಗೂ ವಿಧಾನಗಳನ್ನು ಅಳವಡಿಸಿಕೊಂಡು ತಾಯಿಮರಣ ಹಾಗೂ ಶಿಶು ಮರಣದ ಪ್ರಮಾಣವನ್ನು ಕನಿಷ್ಠತೆಗೆ ತಂದ ಹೆಗ್ಗಳಿಕೆ ಲೇಡಿಗೋಷನ್ ಆಸ್ಪತ್ರೆಯದು.

    ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಐಪಾಸ್ ಫೌಂಡೇಶನ್ ಇದರ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ 2025-26ರಲ್ಲಿ ಕಾನೂನುಬದ್ಧ ವಾಗಿ ನಡೆದ ಗರ್ಭಪಾತ ಮತ್ತು ಅದರ ನಂತರದ ಆರೈಕೆಯಲ್ಲಿ ಶೇಕಡಾ ನೂರರಷ್ಟು ತಾಯಿ ಆರೋಗ್ಯವನ್ನು ಕಾಪಾಡಿ ತಾಯಿ ಮರಣವನ್ನು ಶೂನ್ಯಕ್ಕೆ ತಂದಂತಹ ಕೀರ್ತಿಗೆ ಪಾತ್ರವಾಗಿ ರಾಜ್ಯಕ್ಕೆ ಮೊದಲನೇ ಸ್ಥಾನದಲ್ಲಿರುತ್ತದೆ*.

    ಅಂಕಿ ಅಂಶಗಳ ಪ್ರಕಾರ ಸದ್ರಿ ಆರ್ಥಿಕ ವರ್ಷದಲ್ಲಿ 304 ಕಾನೂನು ಮಿತಿಯ ಗರ್ಭಪಾತಗಳನ್ನು ಲೇಡಿಗೋಷನ್ ಆಸ್ಪತ್ರೆ ಸಮರ್ಥವಾಗಿ ನಿಭಾಯಿಸಿದ್ದು ಪ್ರತಿಯೊಂದು ಪ್ರಕರಣವೂ ಗುಣಮಟ್ಟದ ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್* *ಕಾರ್ಯಕ್ರಮದಡಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿ ಝೀರೋ ಮರಣ ಪ್ರಮಾಣವನ್ನು ದಾಖಲಿಸಿರುವುದು ಹೆಮ್ಮೆಯ ವಿಚಾರ.

    2025-26 ನೇ ಸಾಲಿನ ಅಂಕಿ ಅಂಶಗಳು

    9 ವಾರಗಳ ಮೊದಲ ಗರ್ಭಪಾತ: 191

    10ರಿಂದ 12ವಾರಗಳು: 31

    12 ರಿಂದ 20 ವಾರಗಳು: 52

    20 ರಿಂದ 24 ವಾರಗಳು: 25

    24 ವಾರಗಳ ನಂತರ: 5

    ಒಟ್ಟು: 304

    ಅಲ್ಲದೆ ಶೇಕಡಾ 95 ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆಯನ್ನು ಪ್ರೆರೇಪಿಸಿ ಅನುಸರಣೆ ಮಾಡುವಂತೆ ಮಾಡಿದ ಹಿರಿಮೆಗೆ ಕೂಡಾ ಲೇಡಿಗೋಷನ್ ಆಸ್ಪತ್ರೆ ಒಳಗಾಗಿದೆ.

    ಇಂಥಹ ಅಪೂರ್ವ ಸಾಧನೆಯನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಗರ್ಭಪಾತಾನಂತರದ ತಾಯಿ ಆರೋಗ್ಯ ಕ್ಷೇತ್ರದಲ್ಲಿಯ ಗುಣ ಮಟ್ಟದ ಸೇವೆಗಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಪ್ರಶಸ್ತಿ ಗೆ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಪಾತ್ರವಾಗಿದೆ.

    ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|ದುರ್ಗಾಪ್ರಸಾದ್.ಎಂ.ಆರ್.ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಗುರುತರವಾದ ಈ ಯಶಸ್ಸಿಗೆ ಕಾರಣೀಕರ್ತರಾದ ಕೆ.ಎಂ.ಸಿ.ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ,ಅರಿವಳಿಕೆ ವಿಭಾಗ, ರೇಡಿಯೋಡಯೋಗ್ನೋಸಿಸ್ ವಿಭಾಗ ಮತ್ತು ನವಜಾತ ಶಿಶು ವಿಭಾಗದ ಸರ್ವತಜ್ಞರನ್ನು ಅಭಿನಂದಿಸಿದರು.

    ಅಲ್ಲದೆ ಶುಶ್ರೂಷಕ ವೃಂದ,ಅರೆ ವೈದ್ಯಕೀಯ ಸಿಬ್ಬಂದಿಗಳು,ತಾಂತ್ರಿಕ ವರ್ಗದವರ ಸೇವೆ ಅನನ್ಯ ಎಂದರು.ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿಕೊಂಡಿರುವ ವ್ಯಾಟ್ಸಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ಸಿಸ್ಟಮ್, ಪ್ರಸೂತಿ ತೀವ್ರ ನಿಗಾ ಘಟಕ,ಪ್ರಸೂತಿ ಕ್ರಿಟಿಕಲ್ ಕೇರ್ ಘಟಕ,ಹೈ ರಿಸ್ಕ್ ಪ್ರೆಗ್ನೆನ್ಸಿ ಡೆಲಿವರಿ ಘಟಕ ಇವೆಲ್ಲವೂಗಳೂ ಪೂರಕವಾದ ವ್ಯವಸ್ಥೆಗಳಾಗಿ ತಾಯಿ ಮರಣದ ದರವನ್ನು ಶೂನ್ಯವಾಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.ವಿವಿಧ ಸಂಘ ಸಂಸ್ಥೆಗಳ ಸಿ.ಎಸ್.ಆರ್.ಅನುದಾನದಿಂದ ಕ್ರೋಡೀಕರಿಸಲ್ಪಟ್ಟ ಅತ್ಯಾಧುನಿಕ ಜೀವರಕ್ಷಕ ಉಪಕರಣಗಳು ಗುಣಮಟ್ಟದ ಸೇವಾ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ಮಾನ್ಯ ಆರೋಗ್ಯ ಸಚಿವರು,ಜನಪ್ರತಿನಿಧಿಗಳು,ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು,ಇಲಾಖಾ ಅಧಿಕಾರಿಗಳು,ಸಾರ್ವಜನಿಕ ಸೇವಾ ಮನೋಭಾವದ ಸಮಾಜ ಮುಖಿ ಚಿಂತನೆಯ ಸಂಸ್ಥೆಗಳ ಸಹಕಾರವನ್ನು ಕೊಂಡಾಡಿದ ವೈದ್ಯಕೀಯ ಅಧೀಕ್ಷಕರು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ದೊರಕಿದ ಸ್ಥಾನಮಾನದ ಉಳಿವಿಗಾಗಿ ಕಟಿಬದ್ಧರಾಗಿ ನಿರಂತರ ಶ್ರಮಿಸಿ ತಾಯಂದಿರ ಬಾಳಲ್ಲಿ ಆಶಾಜ್ಯೋತಿಯನ್ನು ಬೆಳಗಬೇಕಾಗಿದೆ ಎಂದರು*

    Sathish Kapikad 

    Share. Facebook Twitter Pinterest LinkedIn Email WhatsApp
    Previous Articleಕ್ರೀಡಾಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಎಂ.ಆರ್. ಪೂವಮ್ಮರಿಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ – ಪೂವಮ್ಮ ಅವರ ಕ್ರೀಡಾ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ : ಮಾಜಿ ಒಲಂಪಿಯನ್ ವಂದನಾ ಪೈ
    Next Article ಆರೋಗ್ಯ ಸಚಿವರ ಕಟ್ಟುನಿಟ್ಟಿನ ಆದೇಶ ಹಿನ್ನೆಲೆ : ಆಹಾರ ಸುರಕ್ಷತಾ ಅಧಿಕಾರಿಗಳಿಂದ ಮಂಜುಗಡ್ಡೆ ತಯಾರಿಕಾ ಘಟಕಗಳ ಪರಿಶೀಲನೆ – ಎಚ್ಚರಿಕೆ

    Related Posts

    ಕರಾವಳಿ

    ಮಂಗಳೂರಿನ ಪತ್ರಕರ್ತರಾದ ರೋನ್ಸ್ ಬಂಟ್ವಾಳ, ರಾಜೇಶ್ ದಡ್ಡಂಗಡಿ, ಶಂಶೀರ್ ಬುಡೋಳಿಯವರಿಗೆ ‘ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’

    November 18, 2026
    ಕರಾವಳಿ

    ನ.20ರಂದು ಮಂಗಳೂರಿನಲ್ಲಿ  ಅಪ್ರತಿಮ ಸಾಮಾಜ ಸುಧಾರಕ, *ಕುದ್ಮುಲ್ ರಂಗರಾಯರ* ಬದುಕು ಮತ್ತು ಸಾಧನೆಗಳನ್ನು ಬಿಂಬಿಸುವ ತುಳು ನಾಟಕ “*ಮಹಾತ್ಮ ಕುದ್ಮುಲ್*”

    November 18, 2026
    ಅಂತಾರಾಷ್ಟ್ರೀಯ

    ದುಬೈಯಲ್ಲಿ ‘ದುಬೈ ಯಕ್ಷೋತ್ಸವ–2026’ – ಶ್ರೀ ಹರಿಲೀಲಾಮೃತಂ” ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆ

    November 17, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.