Close Menu
SK Media NewsSK Media News
    What's Hot

    ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿದ ರಫೇಲ್ ಯುದ್ಧವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರ ಪಯಣ

    October 28, 2026

    ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಎಷ್ಟು ಅನುದಾನ ತಂದಿದ್ದೀರಿ? ಶ್ವೇತಪತ್ರ ಹೊರಡಿಸಿ ನೇರಾನೇರ ಚರ್ಚೆಗೆ ಸಿದ್ಧ : ಶಾಸಕ ಕಾಮತ್ ಅವರಿಗೆ ಕಾಂಗ್ರೆಸ್ ಮುಖಂಡ ಎಸಿ ವಿನಯ್ ರಾಜ್ ಸವಾಲು 

    October 28, 2026

    ಕ್ರೀಡಾಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಂ.ಆರ್. ಪೂವಮ್ಮ ಅವರು ಪ್ರತಿಷ್ಠಿತ ರಾಜ್ಯಮಟ್ಟದ ‘ವಂದನಾ ಪ್ರಶಸ್ತಿ’ಗೆ ಆಯ್ಕೆ

    October 28, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಎಷ್ಟು ಅನುದಾನ ತಂದಿದ್ದೀರಿ? ಶ್ವೇತಪತ್ರ ಹೊರಡಿಸಿ ನೇರಾನೇರ ಚರ್ಚೆಗೆ ಸಿದ್ಧ : ಶಾಸಕ ಕಾಮತ್ ಅವರಿಗೆ ಕಾಂಗ್ರೆಸ್ ಮುಖಂಡ ಎಸಿ ವಿನಯ್ ರಾಜ್ ಸವಾಲು 
    ಕರಾವಳಿ

    ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಎಷ್ಟು ಅನುದಾನ ತಂದಿದ್ದೀರಿ? ಶ್ವೇತಪತ್ರ ಹೊರಡಿಸಿ ನೇರಾನೇರ ಚರ್ಚೆಗೆ ಸಿದ್ಧ : ಶಾಸಕ ಕಾಮತ್ ಅವರಿಗೆ ಕಾಂಗ್ರೆಸ್ ಮುಖಂಡ ಎಸಿ ವಿನಯ್ ರಾಜ್ ಸವಾಲು 

    October 28, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬೇಕಾಗಿ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಬೀದಿ ನಾಟಕ ಮಾಡ್ತಿದ್ದಾರೆ. ಆದರೆ ಮಂಗಳೂರಿನ ಜನರು ಅಷ್ಟು ಮೂರ್ಖರಲ್ಲ. 2019ರಿಂದ 2025ರವರೆಗೆ ಆಡಳಿತ ಇದ್ದದ್ದು ಬಿಜೆಪಿ ಕೈಯಲ್ಲಿ. ದಕ್ಷಿಣ ಕ್ಷೇತ್ರದಲ್ಲಿ 8 ವರ್ಷಗಳಿಂದ ಇವರೇ ಶಾಸಕರು. ಇವರದ್ದೇ ಸರಕಾರ ಆಡಳಿತದಲ್ಲೂ ಇತ್ತು. ಎಲ್ಲವೂ ಇವರ ಕೈಯಲ್ಲೇ ಇದ್ದಾಗ ಮಂಗಳೂರು ನಗರದ ರಸ್ತೆಗಳನ್ನು ಯಾಕೆ ಅಭಿವೃದ್ಧಿ ಪಡಿಸಿಲ್ಲ? ಶಾಸಕರು ಅವರ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಏನು? ಅವರನ್ನು ಆರಿಸಿ ಕಳಿಸಿದ ಜನರ ಸೇವೆಯನ್ನು ಮಾಡಿದ್ದರೆ ಇಂದು ಈ ಬೀದಿ ನಾಟಕ ಮಾಡುವ ಪ್ರಮೇಯ ಬರ್ತಾ ಇರಲಿಲ್ಲ“ ಎಂದು ಕೆಪಿಸಿಸಿ ವಕ್ತಾರ ಎಸಿ ವಿನಯರಾಜ್ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದರು.

    ಕದ್ರಿ ಶಿವಭಾಗ್ ವಾರ್ಡ್ ನಲ್ಲಿ ಇವರದ್ದೇ ಪಕ್ಷದ ಕಾವ್ಯ ನಟರಾಜ್ ಕಾರ್ಪೊರೇಟರ್ ಆಗಿದ್ದರು. ಆಗ ಯಾಕೆ ಮಾತಾಡಿಲ್ಲ? ಈಗ ಯಾಕೆ ನಾಟಕ ಮಾಡ್ತಾ ಇದ್ದೀರಿ ಶಾಸಕರೇ?

    ಮೂರುವರೆ ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಸಿದ್ದರಾಮಯ್ಯರು ಮುಖ್ಯಮಂತ್ರಿಯಾಗಿದ್ದಾಗ 145 ಕೋಟಿ ಹಣ ಮಂಗಳೂರು ಮಹಾನಗರ ಪಾಲಿಕೆಗೆ ಬಂದಿದೆ ,

    ಪ್ರತೀ ಶಾಸಕರಿಗೆ 25 ಕೋಟಿ ಅನುದಾನ, ನೈಸರ್ಗಿಕ ವಿಕೋಪದಡಿಯಲ್ಲಿ 15 ಕೋಟಿ, 15ನೇ ಹಣಕಾಸು ಆಯೋಗದಡಿ 10 ಕೋಟಿ ಅನುದಾನ ಬಂದಿದೆ, ರಾಜ್ಯ ಹಣಕಾಸು ಆಯೋಗ 5 ಕೋಟಿ ನೀಡಿದೆ. ಮೊನ್ನೆ ಮಂಗಳೂರಲ್ಲಿ ನಡೆದ ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 400 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಅದರಲ್ಲಿ ಬಹುಪಾಲು ಟೆಂಡರ್ ಮುಗಿದು ಕಾಮಗಾರಿ ಹಂತದಲ್ಲಿದೆ.

    ವೇದವ್ಯಾಸ್ ಕಾಮತ್ ಅವರೇ ಇಷ್ಟು ಕೋಟಿ ಹಣದಲ್ಲಿ ನಿಮಗ್ಯಾಕೆ ರಸ್ತೆ ಅಭಿವೃದ್ಧಿ ಮಾಡಲು ಆಗಲಿಲ್ಲ? ಶಾಸಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಭಯದಿಂದ ಈ ರೀತಿ ಹಾದಿ ಬೀದಿಯಲ್ಲಿ ಪ್ರಹಸನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

    ಶಾಸಕರೇ ನೀವು ಮಂಗಳೂರಿಗೆ ಎಷ್ಟು ಅನುದಾನ ತಂದಿದ್ದೀರಿ ಎಂದು ಮಂಗಳೂರಿನ ಜನರಿಗೆ ಶ್ವೇತಪತ್ರ ಹೊರಡಿಸಿ. ನಾವು ನೇರಾನೇರ ಚರ್ಚೆಗೆ ತಯಾರಿದ್ದೇವೆ. ನಿಮ್ಮ ವೈಫಲ್ಯ ಮುಚ್ಚಿಹಾಕಲು ನಾಟಕ ಮಾಡಬೇಡಿ ಅದನ್ನು ಬಂದ್ ಮಾಡಿ. ಅಭಿವೃದ್ಧಿ ಕಾರ್ಯಗಳು ಆಗುವಾಗ ಕಾರ್ಯಕ್ರಮದಲ್ಲಿ ನೀವೇ ಅಧ್ಯಕ್ಷ ಸ್ಥಾನವನ್ನು ವಹಿಸುತ್ತೀರಿ ಹೀಗಿರುವಾಗ ನಿಮಗ್ಯಾಕೆ ವಾಸ್ತವ ಸ್ಥಿತಿ ತಿಳಿದಿಲ್ಲ?

    ಮಂಗಳೂರು ದಸರಾ ನಡೆಯುವಾಗ ಜನರು ಜಾತಿ ಮತ ಬೇಧ ಮರೆತು ಪಾಲ್ಗೊಳ್ಳುತ್ತಾರೆ. ದಸರಾ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಇಡೀ ನಗರ ನೈರ್ಮಲ್ಯ, ವಿದ್ಯುದ್ದೀಪ ನಿಮ್ಮ ಕೊಡುಗೆಯಲ್ಲ. ಎಲ್ಲ ಪಕ್ಷಗಳ ಒಕ್ಕೊರಳ ಒತ್ತಾಯದಿಂದ ಇದು ನಡೆಯುತ್ತದೆ ನೀವು ಇನ್ನು ಮುಂದೆ ಎಲ್ಲೂ ಇದು ನನ್ನ ಸಾಧನೆ ಎಂದು ಹೇಳಿಕೊಂಡು ಓಡಾಡಬೇಡಿ. ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಅನುದಾನ ಬಿಡುಗಡೆ ಮಾಡಲು ಯಾವುದೇ ಹಿಂಜರಿಕೆ ಮಾಡುತ್ತಿಲ್ಲ ಎಂದರು.

    645 ಕೋಟಿಯ ಕಾಮಗಾರಿ ಘೋಷಣೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಹಂತದಲ್ಲಿದೆ ಹೀಗಿರುವಾಗ ಯಾವ ಆಧಾರದಲ್ಲಿ ಮಹಾನಗರ ಪಾಲಿಕೆಗೆ ಅನುದಾನ ಬರುತ್ತಿಲ್ಲ ಎನ್ನುತ್ತೀರಿ ಎಂದು ಕಿಡಿಕಾರಿದರು.

    ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಪ್ರಕಾಶ್ ಸಾಲಿಯಾನ್, ಸಲೀಮ್, ಅಪ್ಪಿ, ಸಂಶುದ್ದಿನ್, ಅನಿಲ್ ಪೂಜಾರಿ, ಸವಿತಾ ಮಿಸ್ಕಿತ್, ಅಶ್ರಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಕ್ರೀಡಾಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಂ.ಆರ್. ಪೂವಮ್ಮ ಅವರು ಪ್ರತಿಷ್ಠಿತ ರಾಜ್ಯಮಟ್ಟದ ‘ವಂದನಾ ಪ್ರಶಸ್ತಿ’ಗೆ ಆಯ್ಕೆ
    Next Article ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿದ ರಫೇಲ್ ಯುದ್ಧವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರ ಪಯಣ

    Related Posts

    ಕರಾವಳಿ

    ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿದ ರಫೇಲ್ ಯುದ್ಧವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರ ಪಯಣ

    October 28, 2026
    ಕರಾವಳಿ

    ಕ್ರೀಡಾಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಂ.ಆರ್. ಪೂವಮ್ಮ ಅವರು ಪ್ರತಿಷ್ಠಿತ ರಾಜ್ಯಮಟ್ಟದ ‘ವಂದನಾ ಪ್ರಶಸ್ತಿ’ಗೆ ಆಯ್ಕೆ

    October 28, 2026
    ಕರಾವಳಿ

    ನ.3ರಿಂದ 15 : ಮಾಂಡ್ ಸೊಭಾಣ್ ಸಂಘಟನೆಯ ವತಿಯಿಂದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ -ಸತತ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಗಾಯನದ ಮೂಲಕ ಗಿನ್ನೆಸ್ ದಾಖಲೆಗೆ ಪ್ರಯತ್ನ

    October 28, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.