Close Menu
SK Media NewsSK Media News
    What's Hot

    ನವಂಬರ್ 1ರಂದು ಸುರತ್ಕಲ್ ಬಂಟರ ಭವನದಲ್ಲಿ ರಂಗುರಂಗಿನ ರಂಗೋತ್ಸವ – ಸಂಗೀತ ಗಾನಸುಧೆ – ಶ್ರೀಮತಿ ಸತ್ಯಭಾಮ ನಾಟಕ : ಲಕ್ಷ್ಮಣ್ ಕುಮಾರ್ ಮಲ್ಲೂರ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

    October 27, 2026

    ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳ ಪ್ರದರ್ಶನ ಹಾಗೂ ಮಾರಾಟ: ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ 

    October 26, 2026

    ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ : ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ 

    October 25, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ : ಮಹಾತ್ಮ ಗಾಂಧೀಜಿ ಪ್ರತಿಮೆಗೆ ಖಾದಿ ಹಾರ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ
    ಕರಾವಳಿ

    ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ : ಮಹಾತ್ಮ ಗಾಂಧೀಜಿ ಪ್ರತಿಮೆಗೆ ಖಾದಿ ಹಾರ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ

    October 2, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು, ಅಕ್ಟೋಬರ್.2: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ಶುಕ್ರವಾರ ನಗರದ ರಾಜಾಜಿ ಉದ್ಯಾನವನದಲ್ಲಿ ಆಚರಿಸಲಾಯಿತು.

    ಮಹಾತ್ಮ ಗಾಂಧೀಜಿ ಪ್ರತಿಮೆಗೆ ಖಾದಿ ಹಾರ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು.

    ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಗಾಂಧೀಜಿಯವರ ಬದುಕೇ ಇತರರಿಗೆ ಮಾದರಿಯಾಗಿದೆ. ಅವರು ಮಾತನ್ನಾಡಿದ್ದಕ್ಕಿಂತಲೂ ಇತರರ ಮಾತನ್ನು ಗೌರವದಿಂದ ಆಲಿಸಿ ಪ್ರತಿ ವ್ಯಕ್ತಿಗೆ ಗೌರವ ನೀಡಿದ್ದರು. ಇದುವೇ ಸ್ವಾತಂತ್ರ್ಯ ಹೋರಾಟದಲ್ಲಿ ಅವರನ್ನು ದೇಶದ ನಾಯಕನಾಗಿ ಮಾಡಿತ್ತು ಎಂದರು.

    ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹೀದ್, ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿದರು.

    ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಅಧೀಕ್ಷಕ ಅರುಣ್ ಕೆ., ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ, ಡಿಸಿಪಿ ಸ್ಯಾಮ್ ವರ್ಗಿಸ್, ಡಿ. ಡಿ. ಪಿ ಐ ಶಶಿಧರ್, ಭಾರತ್ ಸೇವಾ ದಳದ ಮುಖಂಡರಾದ ಬಶೀರ್ ಬೈಕಂಪಾಡಿ, ಟಿ ಕೆ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

    ಸಮಾರಂಭದಲ್ಲಿ ಸರ್ವ ಧರ್ಮ ಪ್ರಾರ್ಥನೆ ಹಾಗೂ ಗಾಂಧೀಜಿಯವರಿಗೆ ಪ್ರಿಯವಾದ ‘ರಘುಪತಿ ರಾಘವ ರಾಜಾರಾಮ್’ ಹಾಗೂ ‘ವೈಷ್ಣವ ಜನತೋ’ ಭಜನೆಗಳ ಗಾಯನ ಪ್ರಸ್ತುತಪಡಿಸಲಾಯಿತು.

    ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಪ್ರಕಟಸಿರುವ ವಿಶೇಷ ಸಂಚಿಕೆಗಳನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

    *ಬಾಪೂಜಿ ಪ್ರಬಂಧ* *ವಿಜೇತ ವಿದ್ಯಾರ್ಥಿಗಳಿಗೆ* *ಬಹುಮಾನ ವಿತರಣೆ*:

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಯಂತಿಯ ಅಂಗವಾಗಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಸ್ನಾತಕ-ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

    ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಸ್ವಾಗತಿಸಿದರು. ಸೈದುದ್ದೀನ್ ನಿರೂಪಿಸಿದರು.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleನ್ಯಾಯಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ – ಆಕ್ರೋಶ – ಸಚಿವ ಯು.ಟಿ. ಖಾದರ್ ಮಧ್ಯಸ್ಥಿಕೆ : ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ ರೂ.1.20 ಕೋಟಿ ಪರಿಹಾರ ಘೋಷಣೆ
    Next Article ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ; ರಾಜ್ಯ ಸರ್ಕಾರದಿಂದ ಸೂಕ್ತ ಗೌರವಧನ ನೀಡಲು ಜೆಡಿಎಸ್ ಯುವ ನಾಯಕ ಅಕ್ಷಿತ್ ಸುವರ್ಣ ಆಗ್ರಹ

    Related Posts

    ಕರಾವಳಿ

    ನವಂಬರ್ 1ರಂದು ಸುರತ್ಕಲ್ ಬಂಟರ ಭವನದಲ್ಲಿ ರಂಗುರಂಗಿನ ರಂಗೋತ್ಸವ – ಸಂಗೀತ ಗಾನಸುಧೆ – ಶ್ರೀಮತಿ ಸತ್ಯಭಾಮ ನಾಟಕ : ಲಕ್ಷ್ಮಣ್ ಕುಮಾರ್ ಮಲ್ಲೂರ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

    October 27, 2026
    ಕರಾವಳಿ

    ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳ ಪ್ರದರ್ಶನ ಹಾಗೂ ಮಾರಾಟ: ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ 

    October 26, 2026
    ಕರಾವಳಿ

    ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ : ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ 

    October 25, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.