Close Menu
SK Media NewsSK Media News
    What's Hot

    ಕ್ರೀಡಾಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಂ.ಆರ್. ಪೂವಮ್ಮ ಅವರು ಪ್ರತಿಷ್ಠಿತ ರಾಜ್ಯಮಟ್ಟದ ‘ವಂದನಾ ಪ್ರಶಸ್ತಿ’ಗೆ ಆಯ್ಕೆ

    October 28, 2026

    ನ.3ರಿಂದ 15 : ಮಾಂಡ್ ಸೊಭಾಣ್ ಸಂಘಟನೆಯ ವತಿಯಿಂದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ -ಸತತ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಗಾಯನದ ಮೂಲಕ ಗಿನ್ನೆಸ್ ದಾಖಲೆಗೆ ಪ್ರಯತ್ನ

    October 28, 2026

    ಸತತ ಸೋಲುಗಳ ಹತಾಶೆಯಿಂದ ಪ್ರಧಾನಿಗಳ ತಂದೆಯವರನ್ನು ನಿಂದನೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ಅವರ ಹಿರಿತನಕ್ಕೆ ಶೋಭೆಯಲ್ಲ: ಶಾಸಕ ಕಾಮತ್ 

    October 27, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಹಿಂದೂ ಮಹಾ ಶಕ್ತಿ ಗಣಪತಿ ಉತ್ಸವ ಸಂಭ್ರಮಕ್ಕೆ ತೆರೆ: ಭವ್ಯ ಶೋಭಾಯಾತ್ರೆಯೊಂದಿಗೆ ಶಕ್ತಿನಗರ ಗಣೇಶೋತ್ಸವ–2026 ಸಂಪನ್ನ
    ಕರಾವಳಿ

    ಹಿಂದೂ ಮಹಾ ಶಕ್ತಿ ಗಣಪತಿ ಉತ್ಸವ ಸಂಭ್ರಮಕ್ಕೆ ತೆರೆ: ಭವ್ಯ ಶೋಭಾಯಾತ್ರೆಯೊಂದಿಗೆ ಶಕ್ತಿನಗರ ಗಣೇಶೋತ್ಸವ–2026 ಸಂಪನ್ನ

    September 19, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು : ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರ ಸಹಕಾರದೊಂದಿಗೆ ಪ್ರಥಮ ವರ್ಷದ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬಳಿಯಿರುವ ಛತ್ರಪತಿ ಶಿವಾಜಿ ವೃತ್ತದ ಬಳಿ ನಡೆಯಿತು.

    ಸೋಮವಾರ ಬೆಳಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಗಣಪತಿ ಬಿಂಬ ಪ್ರತಿಷ್ಠೆ ಹಾಗೂ ಗಣಹೋಮ ನೆರವೇರಿತು. ನಂತರ ಅತಿಥಿಗಳು ಗಾಗೂ ಸಮಿತಿ ಪಧಾದಿಕಾರಿಗಳು ಗಣೇಶೊತ್ಸವಕ್ಕೆ ಚಾಲನೆ ನೀಡಿದರು.

    ಬಳಿಕ ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಮೂರು ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು.

    ಸಂಜೆ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಬಳಿಕ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಸೀತಾರಾಮ ಶೆಟ್ಟಿ ವಹಿಸಿದ್ದರು. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ದಿಕ್ಸೂಚಿ ಭಾಷಣ ಮಾಡಿದರು. ಗಣೇಶ ಚತುರ್ಥಿ ಪ್ರಯುಕ್ತ ಪ್ರತಿವರ್ಷ ಆಯೋಜಿಸಲಾಗುವ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

    ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರ ಶಕ್ತಿನಗರದ ಮಾತಾಜಿ ರಮಾದೇವಿ, ವಿಶ್ವ ಹಿಂದೂ ಪರಿಷತ್ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರದ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

    ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಸಹ ಕಾರ್ಯದರ್ಶಿ ಮಾಲತಿ ಸ್ವಾಗತಿಸಿದರು. ಮಾತೃಶಕ್ತಿ–ದುರ್ಗಾವಾಹಿನಿ ಕಾರ್ಯಕರ್ತೆ ಸುಮಲತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸನ್ನಿಧಿ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಧನುಷ್ ಕುಲಾಲ್ ಹಾಗೂ ಶಕೀಲಾ ಕಾವ ಕಾರ್ಯಕ್ರಮ ಸಂಯೋಜಿಸಿದರು.

    ಭವ್ಯ ಶೋಭಾಯಾತ್ರೆ:

    ಉತ್ಸವದ ಅಂಗವಾಗಿ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಬಾಲ ಸಂಸ್ಕಾರ ಕೇಂದ್ರದ ಮಕ್ಕಳ ಕುಣಿತ ಭಜನೆ, ಚೆಂಡೆ–ಸಿಂಗಾರಿ ಮೇಳ ತಂಡದೊಂದಿಗೆ ಗಣಪತಿ ಮೂರ್ತಿಯನ್ನು ಇರಿಸಲಾಗಿದ್ದ ಟ್ಯಾಬ್ಲೋ ಸಾಗಿತು.

    ಶಕ್ತಿನಗರದ ಛತ್ರಪತಿ ಶಿವಾಜಿ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಯು ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ಬಿಕರ್ನಕಟ್ಟೆ, ಕೈಕಂಬ, ಮರೋಳಿ ಮಾರ್ಗವಾಗಿ ಪಡೀಲ್ ಬೈರಾಡಿ ಕೆರೆಗೆ ತಲುಪಿ, ಶ್ರೀ ಮಹಾಗಣಪತಿ ದೇವರ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ ಜಲಸ್ತಂಭನಗೊಳಿಸಲಾಯಿತು.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಬಂಟರ ಯಾನೆ ನಾಡವರ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಯವರಿಗೆ ಡಾ ವಿಶ್ವ ಸಂತೋಷ ಭಾರತೀ ಶ್ರಿ ಮನವಿ
    Next Article ಬಿಪಿಎಲ್ ಕಾರ್ಡ್ ದಾರರಿಗೆ ಬ್ಲಡ್‌ಬ್ಯಾಂಕ್‌ನಿಂದ ಉಚಿತ ರಕ್ತ ಒದಗಿಸುವ ಯೋಜನೆ : ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ

    Related Posts

    ಕರಾವಳಿ

    ಕ್ರೀಡಾಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಂ.ಆರ್. ಪೂವಮ್ಮ ಅವರು ಪ್ರತಿಷ್ಠಿತ ರಾಜ್ಯಮಟ್ಟದ ‘ವಂದನಾ ಪ್ರಶಸ್ತಿ’ಗೆ ಆಯ್ಕೆ

    October 28, 2026
    ಕರಾವಳಿ

    ನ.3ರಿಂದ 15 : ಮಾಂಡ್ ಸೊಭಾಣ್ ಸಂಘಟನೆಯ ವತಿಯಿಂದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ -ಸತತ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಗಾಯನದ ಮೂಲಕ ಗಿನ್ನೆಸ್ ದಾಖಲೆಗೆ ಪ್ರಯತ್ನ

    October 28, 2026
    ಕರಾವಳಿ

    ಸತತ ಸೋಲುಗಳ ಹತಾಶೆಯಿಂದ ಪ್ರಧಾನಿಗಳ ತಂದೆಯವರನ್ನು ನಿಂದನೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ಅವರ ಹಿರಿತನಕ್ಕೆ ಶೋಭೆಯಲ್ಲ: ಶಾಸಕ ಕಾಮತ್ 

    October 27, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.