
ಮಂಗಳೂರು, ಸೆಪ್ಟೆಂಬರ್.13 : ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ, ಮಹಾಗಣಯಾಗವು ಸೆಪ್ಟೆಂಬರ್ ತಿಂಗಳ ತಾರೀಕು 14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್ನಲ್ಲಿ ಜರುಗಲಿದೆ.

ಈ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಸಂಜೆ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮೇನೇಜಿಂಗ್ ಟ್ರಸ್ಟಿ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಅವರ ನೇತೃತ್ವದಲ್ಲಿ ಬಾಲಾಂಭಟ್ ದೇವಸ್ಥಾನದ ಹಿರಿಯ ಅರ್ಚಕರಾದ ಗಿರಿಧರ್ ಭಟ್ ಅವರ ಮಾರ್ಗದರ್ಶನದಲ್ಲಿ ಶರವು ದೇವಸ್ಥಾನದ ಬಳಿ ಇರುವ ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಶ್ರೀ ಸಿದ್ದಿ ವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರಕ್ಕೆ ಕರೆತರಲಾಯಿತು.



ಈ ಸಂದರ್ಭ ಟ್ರಸ್ಟಿ ಡಾ. ಆಶಾಜ್ಯೋತಿ ರೈ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


ನಾಳೆ ಸೋಮವಾರ ಬೆಳಿಗೆ 10 ಕ್ಕೆ ಧ್ವಜಾರೋಹಣ ಬಳಿಕ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ.
ಬೆಳಗ್ಗೆ 10.30 ತೆನೆ ಹಬ್ಬ ವಿತರಣೆ. ಸಂಜೆ 6 ಕ್ಕೆ ಧಾರ್ಮಿಕ ಸಭೆ.ರಾತ್ರಿ 8 ಕ್ಕೆ *ಬಂಟ ಕಲಾ ಸಂಗಮ 2026* ಬಂಟರ ಸಂಘಗಳಿದ ಸಾಂಸ್ಕೃತಿಕ ಸ್ಪರ್ಧೆ ಜರುಗಲಿದೆ..
_Sathish Kapikad


