
ಕರಾವಳಿ ಜಿಲ್ಲೆಗಳಲ್ಲಿ ಮಳೆ ಪೂರ್ತಿ ಕಡಿಮೆ ಆಗಿದ್ದು, ಬೆಳಿಗ್ಗೆ ಮಂಜು ಕವಿದ ವಾತಾವರಣ ಇತ್ತು. ಹಾಸನ ಜಿಲ್ಲೆಯ ಅಲ್ಲಲ್ಲಿ ನಿನ್ನೆ ಸಾಮಾನ್ಯ ಮಳೆ ಆಗಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ – ಬಿಸಿಲಿನ ವಾತಾವರಣ ಮುಂದುವರೆಯಲಿದೆ .
ದ.ಕ.ದ ಅಲ್ಲಲ್ಲಿ ಸಣ್ಣ ಮಳೆಯಾಗುವ ಮುನ್ಸೂಚನೆ ಇದೆ. ಆದರೇ ವಾತಾವರಣದ ತೇವಾಂಶ ಕಡಿಮೆ ಇದ್ದರೇ ಮಳೆ ಸಾಧ್ಯತೆಯೂ ಕಡಿಮೆ ಆಗುತ್ತದೆ. ಸ ದ.ಕ. ಉಡುಪಿ ಉ.ಕ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ.
ಸಧ್ಯ ಅರಬ್ಬೀ ಸಮುದ್ರದಿಂದ ಒಣಗಾಳಿ ಬೀಸುತ್ತಿದ್ದು ಬೇಸಿಗೆಯ ವಾತಾವರಣ ಇದ್ದರೂ ಬಂಗಾಳ ಕೊಲ್ಲಿ ಮಧ್ಯಭಾಗದಲ್ಲಿ ಸೆಪ್ಟೆಂಬರ್ 12 ರ ನಂತರ ವಾಯುಭಾರಕುಸಿತ ಆಗುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್ 15 ರಿಂದ ಸಂಜೆಯ ವಾಡಿಕೆ ಮಳೆ ಆರಂಭವಾಗುವ ಮುನ್ಸೂಚನೆ ಇದೆ.
ಮಲೆನಾಡಿನ ಕೊಡಗು ಹಾಸನ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ – ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳ ತಾಲ್ಲೂಕುಗಳಲ್ಲಿ ಸಂಜೆ ಅಲ್ಲಲ್ಲಿ ತುಂತುರು ಮಳೆಯಾಗಬಹುದು. ಇನ್ನು ತಮಿಳುನಾಡು ಮೂಲಕ ಪೂರ್ವ/ಅಗ್ನೇಯದ ಮೋಡ ಬರುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮೈಸೂರು ಮಂಡ್ಯ ಚಾಮರಾಜನಗರ ರಾಮನಗರ ಕೋಲಾರ ಬೆಂಗಳೂರು – ಗ್ರಾಮಾಂತರ ಜಿಲ್ಲೆಗಳ ಅಲ್ಲಲ್ಲಿ ಸಂಜೆ- ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ತಮಿಳುನಾಡು ಮೂಲಕ ಬರುವ ಮೋಡದಿಂದ ಸೆಪ್ಟೆಂಬರ್ ತಿಂಗಳು ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ.
ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಂಜೆ ರಾತ್ರಿ ಮೋಡದ ವಾತಾವರಣ ಇರಬಹುದು. ಬೆಳಗಾವಿ ಧಾರವಾಡ ಬಾಗಲಕೋಟೆ ಬಿಜಾಪುರ ಬೀದರ್ ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಮಳೆಯಾಗುವ ಮುನ್ಸೂಚನೆ ಇದೆ.
ಉತ್ತರ ಭಾರತದಲ್ಲಿರುವ ಲೋ ಪ್ರೆಷರ್ ಪ್ರಭಾವದಿಂದ ದೆಹಲಿಯಲ್ಲಿ ಭಾರೀ ಮಳೆಯಾಗಿದೆ. ಏಲ್ ನಿನೋ ಅಕ್ಟೋಬರ್ ನವೆಂಬರ್ ತಿಂಗಳು ಗರಿಷ್ಠ ಮಟ್ಟಕ್ಕೆ ತಲುಪಿದರೂ ಬಂಗಾಳ ಕೊಲ್ಲಿಯಲ್ಲಿ ಸೆ12ರ ನಂತರ ವಾಯುಭಾರಕುಸಿತಗಳಾಗುವ ಸಾಧ್ಯತೆ ಇರಲಿದ್ದು ಇದರ ಪ್ರಭಾವದಿಂದ ರಾಜ್ಯದಲ್ಲಿ ಗುಡುಗು ಮಳೆ ಆರಂಭವಾಗಬಹುದು. ಈ ಸಲ ಡಿಸೆಂಬರ್ ತನಕ ಆಗಾಗ ಮಳೆಯಾಗುವ ಸಾಧ್ಯತೆಗಳಿವೆ.
_Sathish Kapikad


